ನಟ ಪೃಥ್ವಿ ಅಂಬರ್ ಅಭಿನಯದ ‘ಚೌಕಿದಾರ್’ ಸಿನಿಮಾದ ಅಪ್ಪ ಅನ್ನೋ #ಚೌಕಿದಾರ ಹೃದಯವ ಕಾಯೋನು ಎನ್ನುವ ಭಾವನಾತ್ಮಕ ಹಾಡು ಬಿಡುಗಡೆಗೊಂಡಿದೆ
ಅಪ್ಪನ ಸ್ಥಾನಮಾನವನ್ನು ಬಹಳ ಭಾವನಾತ್ಮಕವಾಗಿ ಬಣ್ಣಿಸಿರೋ ಈ ಹಾಡಿಗೆ ಸಚಿನ್ ಬಸ್ರೂರ್ ಸಂಗೀತ ನೀಡಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ವಿಜಯಪ್ರಕಾಶ್ ಗಾಯನವಿದೆ, ಪೃಥ್ವಿ ಅಂಬರ್ ಮತ್ತು ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ ಟೀಸರ್ ಇತ್ತಿಚೆಗೆ ಬಿಡುಗಡೆಯಾಗಿತ್ತು, ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನವಿದ್ದು, ಹಿರಿಯ ನಟ ಸಾಯಿ ಕುಮಾರ್, ಪೃಥ್ವಿ ತಂದೆ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಧರ್ಮ, ಹಿರಿಯ ನಟಿ ಶ್ವೇತಾ ಇನ್ನೂ ಕೆಲವು ನಟ-ನಟಿಯರಿದ್ದಾರೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ಸಹ ನಿರ್ಮಾಣ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಅವರುಗಳು ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಪೃಥ್ವಿರಾಜ್ ಧಘಾರಿ ಸಹನಿರ್ದೇಶನ ಈ ಸಿನಿಮಾಕ್ಕಿದೆ, ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.
ಅಪ್ಪನ ಸ್ಥಾನಮಾನವನ್ನು ಬಹಳ ಭಾವನಾತ್ಮಕವಾಗಿ ಬಣ್ಣಿಸಿರೋ ಈ ಹಾಡಿನ್ನು ನೀವೊಮ್ಮೆ ಕೇಳಿ…