ಆಪರೇಷನ್ ಸಿಂಧೂರ: ಪಾಕ್​​ಗೆ ಚೀನಾ ನೀಡಿದ್ದ ಯುದ್ಧ ವಿಮಾನ JF-17 ಹೊಡೆದುರುಳಿಸಿದ ವಾಯುಪಡೆ

0
16

ನವದೆಹಲಿ : ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ JF-17 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.
ಭಾರತವು ಪಾಕಿಸ್ತಾನದ ಅಪಾಯಕಾರಿ ಯುದ್ಧ ವಿಮಾನಗಳಾದ F-16 ಮತ್ತು JF-17 ಗಳನ್ನು ಹೊಡೆದುರುಳಿಸಿದೆ. ಈ ಪಾಕಿಸ್ತಾನಿ ವಿಮಾನವನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ನಾಶಪಡಿಸಿದೆ, ಪಾಕಿಸ್ತಾನವು ಚೀನಾದ JF-17 ಅನ್ನು ಖರೀದಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿತ್ತು. ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಿಒಕೆ ಒಳಗೆ 9 ಸ್ಥಳಗಳ ಮೇಲೆ ದಾಳಿ ನಡೆಸಿದ್ದು. ಈ ವೇಳೆ ದಾಳಿಗೆ ಪ್ರತಿರೋಧ ತೋರಲು ಬಂದ ಪಾಕಿಸ್ತಾನದ ಜೆಎಫ್​-17 ಯುದ್ದ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಪುಲ್ವಾಮಾದ ಪ್ಯಾಂಪೋರ್‌ನಲ್ಲಿ ಜೆಟ್ ಅನ್ನು ಹೊಡೆದುರುಳಿಸಲಾಗಿದೆ.

Previous articleರಾಯಚೂರು ಜಿಲ್ಲಾ ಪ್ರವಾಸ ರದ್ದುಗೊಳಿಸಿದ ಸಿಎಂ
Next articleಆಪರೇಷನ್ ಸಿಂಧೂರ್: ಸೇನಾ ಕಾರ್ಯಾಚರಣೆ ಬಗ್ಗೆ ಭಾರತದಿಂದ ಮಹತ್ವದ ಸುದ್ದಿಗೋಷ್ಠಿ