Home Advertisement
Home ಅಪರಾಧ ಅಪಘಾತ: ಐವರು ಸಾವು

ಅಪಘಾತ: ಐವರು ಸಾವು

0
107

ಮಧುಗಿರಿ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಐದು ಜನರು ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ವ್ಯಾಪ್ತಿಯ ಕೊರಟಗೆರೆ ಮಧುಗಿರಿ ಗಡಿ ಭಾಗದ ಕೆ.ಎಫ್ ರಸ್ತೆಯ ಸಮೀಪದ ಕಾಟಗಾನ ಹಟ್ಟಿಯ ಬಳಿ ನಡೆದಿದೆ.
ಪಾವಗಡದ ಎತ್ತಿನಹಳ್ಳಿ ಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಾಗೂ ತುಮಕೂರಿ ನಿಂದ ಬರುತ್ತಿದ್ದ ಮತ್ತೊಂದು ಕಾರಿನ ನಡುವೆ ಪರಸ್ಪರ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ(50), ಸಿಂಧು(40), ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದವರಾದ ಚಾಲಕ ಸಿದ್ದಗಂಗಪ್ಪ(34) ಹಾಗೂ ನಾಗರಾಜು(30) ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರಾಯಕ್ಸ್ ದೇವಾ(8) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆಂದು ಎತ್ತಿನಹಳ್ಳಿಯ ಗೀತಾ(38) ಅವರ ಪುತ್ರ ಯೋಧ, ಚಾಲಕ ಆನಂದ್ ಹಾಗೂ ಮೃತ ಸಿಂಧೂರವರ ಒಂದು ವರ್ಷ ಪ್ರಾಯದ ಗಂಡು ಮಗುವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಮೃತಪಟ್ಟ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.