ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಭಾನುವಾರ ಮಾತೆಯರಿಂದ ನಗರದಲ್ಲಿ ಸಂಕೀರ್ತನ ಯಾತ್ರೆ ನಡೆಯಿತು.
ನಗರದ ಬೋಳ ರಾಮೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಸಂಕೀರ್ತನ ಯಾತ್ರೆ ಐಜಿ ರಸ್ತೆಯಲ್ಲಿ ಸಾಗಿ ರತ್ನಗಿರಿ ರಸ್ತೆಯ ಮೂಲಕ ಪಾಲಿಟೆಕ್ನಿಕ್ ತಲುಪಿ ಅಲ್ಲಿಂದ ಮಹಿಳೆಯರು ವಿವಿಧ ವಾಹನಗಳಲ್ಲಿ ದತ್ತ ಪೀಠಕ್ಕೆ ತೆರಳಿದರು.
ಅನುಸೂಯ ಜಯಂತಿ ಅಂಗವಾಗಿ ಸಂಕೀರ್ತನ ಯಾತ್ರೆ ಆಚರಣೆಯೊಂದಿಗೆ ಇಂದಿನಿಂದ ನಡೆಯುವ ಮೂರು ದಿನಗಳ ದತ್ತ ಜಯಂತಿ ಉತ್ಸವ ಚಾಲನೆ ನೀಡಲಾಯಿತು.
ಸಂಕೀರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದಕ್ಷಿಣ ಭಾರತದ ಮಾತೃ ಶಕ್ತಿ ಸಂಯೋಜಿಕೆ ಶುಭ, ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ಮಾಜಿ ಸಚಿವ ಸಿ.ಟಿ. ರವಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.