ಅನುಮಾನಾಸ್ಪದವಾಗಿ ಚಿರತೆ ಸಾವು

0
25

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರವಾಸಿಗರ ಪ್ರಾಣಿ ವೀಕ್ಷಣಾ ಸಫಾರಿ ಮಾರ್ಗದ, ಕೊರಾಮರ ಗುಡ್ಡ ರಸ್ತೆಯಲ್ಲಿ ಒಂದು ಕಣ್ಣು ಕುರುಡಾಗಿದ್ದ ಚಿರತೆ ಸಾವಟಿನ್ನಪ್ಪಿದೆ. ಅದರ ಬೆನ್ನುಮೂಳೆ, ಮಂಡಿ ಮುರಿದಿದೆ, ಯಾವುದೇ ಮೇಲ್ಬಾಗದಲ್ಲಿ ಗಾಯಗಳು ಕಂಡುಬಂದಿಲ್ಲ, ಬಲವಾದ ಹೊಡೆತ ಬಿದ್ದು ಮೂಳೆ ಮುರಿದಿದೆ.
ನಾಲ್ಕೈದು ದಿನಗಳಿಂದ ಚಿರತೆ ಆಹಾರ ನೀರು ಸೇವಿಸದೇ ನಡೆಯಲಾಗದೆ, ನಿತ್ರಾಣಗೊಂಡು ಸಾವನ್ನಪ್ಪಿದೆ. ಒಂದು ಕಣ್ಣು ಕಾಣದ ಕಾರಣ ಚಿರತೆ ಯಾವಾಗಲೂ ಸಫಾರಿ ರಸ್ತೆಯ ಇಕ್ಕೆಲಗಳಲ್ಲಿ ಕಾಣಸಿಗುತಿತ್ತು. ಸಫಾರಿ ವಾಹನ ಗುದ್ದಿದ ಪರಿಣಾಮ ಅದರ ಹಿಂದಿನ ಮೂಳೆ ಮುರಿದು ತಿರುಗಾಡಲು ಸಾಧ್ಯವಾಗಿಲ್ಲ. ಈ ಅಪಘಾತ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಡೆದಿದೆ ಎನ್ನಲಾಗುತ್ತಿದೆ.

Previous articleಹನಿಟ್ರ್ಯಾಪ್‌ಗೆ ಶರಣಾದ್ರಾ ಸರ್ವೆಯರ್ ಶಿವಕುಮಾರ್
Next articleಭದ್ರಾವತಿ ಶಾಸಕರ ದೌರ್ಜನ್ಯ, ದಬ್ಬಾಳಿಕೆ ಬಹಳ ದಿನ ನಡೆಯಲ್ಲ