ದಾವಣಗೆರೆ: ಬೆಣ್ಣೆ ಪಡ್ಡು ಮಾಡುವ ವೇಳೆ ಅನಿಲ ಸೋರಿಕೆಯಿಂದ ಓಮಿನಿಗೆ ಬೆಂಕಿಹೊತ್ತಿ ಉರಿದ ಘಟನೆ ನಗರದ ಗುಂಡಿ ವೃತ್ತದಲ್ಲಿ ನಡೆದಿದೆ.
ಓಮಿನಿಯಲ್ಲಿದ್ದ ಸಿಎನ್ ಜಿ ಗ್ಯಾಸ್ ಸೋರಿಕೆಯಿಂದ ಒತ್ತಿ ಓಮಿನಿ ಹೊತ್ತಿ ಉರಿದಿದ್ದು, ಕಾಂಚನ ಮತ್ತು ಅರ್ಚನ ಎಂಬುವರಿಗೆ ಸೇರಿದ ಓಮಿನಿಯೆಂದು ತಿಳಿದುಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದು, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.