ಮಂಗಳೂರು: ದೇಶದ ಶ್ರೀಮಂತ ದೇವಸ್ಥಾನವಾದ ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಪೆರಿಯ ನಂಬಿ ಪಟ್ಟ ದ.ಕ. ಜಿಲ್ಲೆಯ ಅರ್ಚಕರಿಗೆ ಪ್ರಾಪ್ತಿಯಾಗಿದೆ. ಅಕ್ಕರದೇಶಿ ಪ್ರತಿನಿಧಿಯಾಗಿರುವ ಪೆರಿಯ ನಂಬಿ ಅಥವಾ ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಅನಂತ ಪದ್ಮನಾಭ ಸ್ವಾಮಿ ಸಂಸ್ಥಾನದಿಂದ ನೀಡುವ ಕೊಡೆ ಅಥವಾ ಛತ್ರಿ ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಮಹಾ ಅರ್ಚಕ ಸ್ಥಾನವನ್ನು ಈವರೆಗೆ ಅತಿ ಸಣ್ಣ ವಯಸ್ಸಿನಲ್ಲಿ ಪಡೆದ ಯಾವುದೇ ನಿದರ್ಶನಗಳು ಇಲ್ಲ.