ಅಧಿಕಾರಿಯನ್ನು ಮೊದಲು ಬಂಧಿಸಬೇಕು

0
26

ಬೆಂಗಳೂರು: ಮುಡಾ ಕಮಿಷನ‌ಗೆ ಸೈಟ್ ವಾಪಸ್ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಅಧಿಕಾರಿಯನ್ನು ಮೊದಲು ಬಂಧಿಸಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕೋರ್ಟ್‌ನಲ್ಲಿ ನಿವೇಶನಗಳು ನಮ್ಮದೇ ಎಂದು ಹೇಳಿದ್ದಾರೆ. ಆಸ್ತಿ ವಿವಾದ ಕೋರ್ಟ್ ಅಂಗಳದಲ್ಲಿದೆ. ಮುಡಾ ಕಮಿಷನರ್ ಯಾವ ಆಧಾರದ ಮೇಲೆ ಸೈಟ್ ವಾಪಸ್ ಪಡೆದು ಎಂದಿರುವ ಕುಮಾರಸ್ವಾಮಿ, ಅದು ಯಾರ ಆಸ್ತಿ..? ಗ್ರಾಂಟ್ ಆಗಿರುವ ಲ್ಯಾಂಡ್. ಅದನ್ನ ಖರೀದಿ ಮಾಡಿ ಗಿಫ್ಟ್ ಕೊಟ್ರು. ಬಳಿಕ ಕೋರ್ಟ್‌ನಲ್ಲಿ ನನ್ನದೇ ಆಸ್ತಿ ಎಂದಿದ್ದಾರೆ. ಜುಜುಬಿ ನಿವೇಶನಗಳು ಅಂತಾನೂ ಹೇಳಿದ್ರು. ಆ ಬಳಿಕ 62 ಕೋಟಿ ಬೆಲೆ ಬಾಳುವ ಆಸ್ತಿ ಅಂದಿದ್ದರು. ಯಾವ ಆಧಾರದ ಮೇಲೆ ಸೈಟ್ ವಾಪಸು ತೆಗೆದುಕೊಳ್ಳುತ್ತಾರೆ. ಮುಡಾ ಕಮಿಷನ‌ಗೆ ಸೈಟ್ ವಾಪಸ್ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಅಧಿಕಾರಿಯನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Previous articleಆತ್ಮ ಸಾಕ್ಷಿಯ ನ್ಯಾಯಾಲಯ ಎಲ್ಲಕ್ಕಿಂತ ಮಿಗಿಲು
Next articleಭೀಕರ ಅಪಘಾತ: ಚಾಲಕನ ಎದೆ ಹೊಕ್ಕ ಕಬ್ಬಿಣದ ಪೈಪ್‌