ಅಧಿಕಾರಿಗಳ ವಿರುದ್ಧ ಮಾತಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ

0
20

ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಗರಂ ಆಗಿ ಮಾತನಾಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಯಾರೋ ಆರ್ ಎಸ್ ಎಸ್ ನವರು ಈ ಕೃತ್ಯವನ್ನ ಮಾಡಿದ್ದಾನೆ. ಆತನ ಮೇಲೆ ಕೇಸ್ ಆಗಿದೆ ಅರೆಸ್ಟ್ ಆಗಿದ್ದಾನೆ. ಪೊಲೀಸರು ಆತನನ್ನು ಏಕೆ ಉದಯಗಿರಿ ಪೊಲೀಸರ ಠಾಣೆಯಲ್ಲಿ ಇಟ್ಟರು ಉದಯಗಿರಿಯಲ್ಲಿ ಮುಸ್ಲೀಂ ಬಾಹುಳ್ಯ ಇದೆ. ನಾವಷ್ಟೆ ಅಲ್ಲ ಅಧಿಕಾರಿಗಳು ಸಹ ನಿರ್ಧಾರ ಮಾಡಬೇಕು ಎಂದು ಪೊಲೀಸರ ವಿರುದ್ದ ಕಿಡಿಕಾರಿದರು. ಈ ಪೊಲೀಸರಿಗೆ ಏನಾಗಿದೆ? ಮಿನಿಮಮ್ ಕಾಮನ್ ಸೆನ್ಸ್ ಬೇಡ್ವಾ? ಆರೆಸ್ಟ್ ಆದವನನ್ನು ಪೊಲೀಸರು ಏಕೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇಟ್ಟರು? ಈ ಪೊಲೀಸವರಿಗೆ ಬುದ್ಧಿ ಬೇಡ್ವ. ಸರ್ಕಾರದಲ್ಲಿ ನಾವಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ನಿರ್ಧಾರ ಮಾಡಬೇಕು ಎಂದರು.

ಶಾಸಕರ ಮಗನ ರೌಡಿಸಂ: ಶಾಸಕ ಆಗಲಿ ಅಥವಾ ಶಾಸಕರ ಮಗನೇ ಆಗಲಿ ಯಾರೂ ಅಧಿಕಾರಿಗಳಿಗೆ ಹಾಗೆ ಮಾತನಾಡಬಾರದು, ಅಂತಹವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಈ ರೀತಿ ಮಾತನಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

Previous articleಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್‌ನಲ್ಲಿ ಬೆಂಕಿ
Next articleಕೋಮು ಪಕ್ಷಪಾತದ ಧೋರಣೆ ಬದಿಗಿಟ್ಟು ಕಠಿಣ ಕ್ರಮ ಜರುಗಿಸಿ