ಅದ್ದೂರಿಯಾಗಿ ಜರುಗಿದ ಸಂಜೀವ ಆಂಜನೇಯ ಜಾತ್ರೆ ರಥೋತ್ಸವ

ಕೆಂಭಾವಿ : ಕಾರ್ತಿಕ ಮಾಸದ ಕೊನೆಯ ದಿನದಂದು ಪಟ್ಟಣದ ಸಂಜೀವನಗರದ ಸಂಜೀವ ಆಂಜನೇಯ ದೇವರ ಜಾತ್ರಾ ಮಹೋತ್ಸವದ ಬಲು ಅದ್ದೂರಿಯಾಗಿ ಜರುಗಿತು ಭಕ್ತರು ಇಷ್ಟಾರ್ಥ ಪಲಿಸುವಂತೆ ದೇವರಲ್ಲಿ ಬೇಡಿಕೊಂಡು ತೇರಿಗೆ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಭಾವದಿಂದ ಜಯಘೋಷಗಳ ನಡುವೆ ಎಳುಕೋಟಿಗೆ ಎಳು ಕೋಟಿಗೆ ಆಂಜನೇಯ ಮಾರಾಜಕೀಯ ಜೈ ಎಂದು ಜಯ ಘೋಷಗಳನ್ನು ಹಾಕುತ್ತಾ ದೇವರ ಕೃಪೆಗೆ ಪಾತ್ರರಾದರು ದೇವಸ್ಥಾನದ ಸಂಚಾಲಕರಾದ ಬಾಲಕೃಷ್ಣ ಸಂಜೀವರಾವ ಕುಲಕರ್ಣಿ ಅವರ ಸಾನಿಧ್ಯದಲ್ಲಿ ರಥೋತ್ಸವ ಜರುಗಿತು ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಜನ್ರು ಕುಟುಂಬ ಸಮೇತರಾಗಿ ಪಾಲ್ಗೊಂಡು ಜಾತ್ರೆಯಲ್ಲಿ ಅನ್ನಪ್ರಸಾದ ಸವಿದು ಹಾಗೂ ಮಕ್ಕಳಿಗೆ ಆಟಿಕೆಗಳನ್ನು ಖರೀದಿ ಮಾಡಿಕೊಂಡು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.