ಹುಬ್ಬಳ್ಳಿ: ನನ್ನ ಮೇಲೆ ಬಂದಿರುವುದು ಚೆಕ್ ಬೌನ್ಸ್ ಪ್ರಕರಣವಲ್ಲ. ನಾವೇ ಕೋರ್ಟ್ ನಲ್ಲಿ ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ. ಇದರಲ್ಲಿ ನನ್ನನ್ನೂ ಎಳೆದು ತರಬೇಡಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ರಾತ್ರಿ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾವು ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ. ನಾವೇ ಒಪ್ಪಿಕೊಂಡು ಮಾಡಿಕೊಂಡಿರುವಂಥದ್ದು ಅದು. ಡಿ.೨೬ ರಂದೇ ಬಂದಿದೆ. ಇದು ೧೨ ವರ್ಷದ ವ್ಯಾಜ್ಯ. ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ನಾನೇ ಖದ್ದು ಬರವಣಿಗೆಯಲ್ಲಿ ಕೊಟ್ಟಿದ್ದೇನೆ. ಇಷ್ಟಕ್ಕೂ ಇದು ನನ್ನ ವೈಯಕ್ತಿಕ್ಕೆ ಸಂಬಂಧಿಸಿದ್ದಲ್ಲ. ಕಂಪನಿಗೆ ಸಂಬಂಧಿಸಿದ ವ್ಯವಹಾರದ ವಿಚಾರ. ಮಾಧ್ಯಮಗಳು ತಪ್ಪಾಗಿ ಮಾಹಿತಿ ರವಾನಿಸಬಾರದು ಎಂದು ಮನವಿ ಮಾಡಿದರು.