ಅತ್ತೆಯನ್ನು ೯೫ ಬಾರಿ ಇರಿದು ಕೊಂದಿದ್ದ ಸೊಸೆಗೆ ಗಲ್ಲು ಶಿಕ್ಷೆ

0
10

ಭೋಪಾಲ್: ಅತ್ತೆಯನ್ನು ಕುಡು ಗೋಲಿನಿಂದ ೯೫ ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಸೊಸೆಗೆ ಮಧ್ಯಪ್ರದೇಶದ ರೇವಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ೨೦೨೨ರ ಜುಲೈ ೧೨ರಂದು ಮಂಗಾವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿತ್ತು. ಕೌಟುಂಬಿಕ ಕಲಹದಿಂದಾಗಿ ಆರೋಪಿ ಸೊಸೆ ಕಾಂಚನ್, ತಮ್ಮ ಅತ್ತೆ ಸರೋಜ್ ಕೋಲ್(೫೦) ಅವರಿಗೆ ಕುಡುಗೋಲಿನಿಂದ ಚುಚ್ಚಿ ಹಲ್ಲೆ ಮಾಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿದಿರಲಿಲ್ಲ.
ಘಟನೆ ವೇಳೆ ಮನೆಯಲ್ಲಿ ಅತ್ತೆ ಒಬ್ಬರೇ ಇದ್ದರು. ಮೃತ ಸರೋಜಳ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೊಸೆ ಕಾಂಚನ್ ಕೋಲ್ ಜೊತೆಗೆ ಸರೋಜ್ ಕೋಲ್ ಅವರ ಪತಿ ವಾಲ್ಮೀಕಿ ಕೋಲ್ ಅವರನ್ನೂ ಪೊಲೀಸರು ಆರೋಪಿಯನ್ನಾಗಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆ ಯಿಂದಾಗಿ ವಾಲ್ಮೀಕಿಯನ್ನು ಖುಲಾಸೆಗೊಳಿಸಲಾಯಿತು.

Previous articleಮದಕ್ಕೆ ಕರುಣೆ ಇಲ್ಲ
Next articleಡೆಂಗ್ಯುಗೆ ಮಗು ಬಲಿ