ಅತ್ತೆಯನ್ನು ಕೊಲೆ ಮಾಡಿದ್ದ ಅಳಿಯ ಅತ್ಮಹತ್ಯೆ

0
18

ಅಳಿಯನಿಂದ ಅತ್ತೆಯ ಕೊಲೆ

ಮೂಡಿಗೆರೆ: ಕುಡಿದ ಮತ್ತಿನಲ್ಲಿ ಬುದ್ದಿ ಹೇಳಿದಕ್ಕೆ ಸಿಟ್ಟಿನಿಂದ ಸಹೋದರನ ಅತ್ತೆಯನ್ನು ಕೊಲೆ ಮಾಡಿದ್ದ ಅಳಿಯು ಇಂದು ಶಶಿಧರ್ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
ಮಂಗಳವಾರ ಭಾರತೀಬೈಲು ಕಾಫಿತೋಟದಲ್ಲಿ ಆರೋಪಿ ಶಶಿಧರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಶಿಧರ್ ಸುತ್ತಿಗೆಯಿಂದ ಅತ್ತೆ ಯಮುನಾ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿತ್ತು.
ಸುತ್ತಿಗೆಯಿಂದ ತಲೆಗೆ ಹೊಡೆದ ಪರಿಣಾಮ ಯಮುನಾ (೬೫) ಸಾವನ್ನಪ್ಪಿದ್ದರು. ಘಟನೆಯ ನಂತರ ಆರೋಪಿ ಶಶಿಧರ್ ಸ್ಥಳದಿಂದ ಎಸ್ಕೆಪ್ ಆಗಿದ್ದ. ಈ ಸಂಬಂಧ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದರು. ಘಟನಾ ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.

Previous articleಆಹಾರ ಪದಾರ್ಥ ಶೇಖರಣೆ ಪ್ರಕರಣ: 18 ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನ ವಶಕ್ಕೆ
Next articleನೌಕಾನೆಲೆ ಮಾಹಿತಿ ಸೋರಿಕೆ: ಇಬ್ಬರನ್ನು ಮತ್ತೆ ಬಂಧಿಸಿದ NIA