ಅಣ್ಣತಮ್ಮಂದಿರ ಜಗಳ ಬಗೆಹರಿಸುವ ವಿಶ್ವಾಸ ಇದೆ

0
7

ಗದಗ(ಲಕ್ಷ್ಮೇಶ್ವರ): ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಇಲ್ಲಿ ಪ್ರಜಾಪ್ರಭುತ್ವ ಇದೆ ಇದು ಅಣ್ಣ-ತಮ್ಮರ ಜಗಳ ಹಿರಿಯರು‌ ಕುಳಿತುಕೊಂಡು ಬಗೆಹರಿಸುವ ವಿಶ್ವಾಸ ಇದೆ. ಬಗೆಹರಿಸುವ ಎಲ್ಲಾ ಪ್ರಯತ್ನಗಳು ಆಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ನಿವಾಸದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ರಾಮುಲು ಹಾಗೂ ಜನಾರ್ದನರೆಡ್ಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಇಲ್ಲಿ ಪ್ರಜಾಪ್ರಭುತ್ವ ಇದೆ ಇದು ಅಣ್ಣ-ತಮ್ಮರ ಜಗಳ ಹಿರಿಯರು‌ ಕುಳಿತುಕೊಂಡು ಬಗೆಹರಿಸುವ ವಿಶ್ವಾಸ ಇದೆ. ಬಗೆ ಹರಿಸುವ ಎಲ್ಲಾ ಪ್ರಯತ್ನಗಳು ಆಗುತ್ತಿವೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಮೇಲೆ ಹೈಕಮಾಂಡ್ ನಿಯಂತ್ರಣ ಕಳೆದುಕೊಂಡಿದಿಯಾ ಎಂಬ ಪ್ರಶ್ನೆಗೆ ಹೈಕಮಾಂಡ್ ಯಾವಾಗಲೂ ಹೈಕಮಾಂಡ್. ಅವರು ಏನು ಹೇಳುತ್ತಾರೆ ಅದೇ ಅಂತಿಮ‌ ಎಂದರು.
ಶಾಸಕ ಜನಾರ್ದನ್ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಪ್ರಶ್ನೆಗೆ ಕುಚಿಕು ಅಂದ್ರೆ ಅತ್ಯಂತ ಆತ್ಮೀಯ ಗೆಳೆಯರು. ಆತ್ಮೀಯ ಗೆಳೆಯರ ಮಧ್ಯೆನೇ ಕೆಲವು ವೇಳೆ ಹೆಚ್ಚು ಕಡಿಮೆ ಭಿನ್ನ ಭೇದಗಳು ಬರುತ್ತವೆ. ಅಂತಿಮವಾಗಿ ಅವರ ಗೆಳೆತನ ಗೆಲ್ಲುತ್ತದೆ. ಇಬ್ಬರು ಒಂದಾಗುತ್ತಾರೆ. ಇಬ್ಬರು ಒಂದಾಗಿ ಬರುವ ದಿನಗಳಲ್ಲಿ ಒಗ್ಗಟ್ಟಿನಿಂದ ಬಿಜೆಪಿ ಕಟ್ಟುವ ಕೆಲಸ ಮಾಡುತ್ತಾರೆ ಎಂದರು.
ಶ್ರೀರಾಮುಲು, ಜನಾರ್ದನ್ ರೆಡ್ಡಿ ಪ್ರತ್ಯೇಕ ಸುದ್ದಿಗೋಷ್ಠಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಸುದ್ದಿಗೋಷ್ಠಿ ಪ್ರಕ್ರಿಯೆ ಆದ ಮೇಲೆನೆ ಒಂದಾಗುವುದು. ಶ್ರೀರಾಮುಲು ಬಳಿ ನಾನು ಮಾತನಾಡಿದ್ದೇನೆ. ನಂತರ ಜನಾರ್ದನ್ ರಡ್ಡಿ ಬಳಿಯೂ ಮಾತನಾಡುತ್ತೇನೆ. ಎಲ್ಲವೂ ಸರಿಯಾಗುತ್ತದೆ‌. ರಾಜ್ಯ ರಾಜಕಾರಣದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ನಮ್ಮ ಬಿಜೆಪಿ ಮನೆ ಬಾಗಿಲು ಒಂದೇ ಇದೆ. ಬಿಜೆಪಿ ಒಂದೆ ಮನೆ, ಬಾಗಿಲು ಒಂದೆ ಇದೆ. ಈ ಬಗ್ಗೆ ಯಾರೂ ವಿಚಾರ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಹೋಗುವ ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

Previous articleಮೈಕ್ರೋ ಫೈನಾನ್ಸ್ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲ
Next article“ನಮ್ಮನ್ನು ಕ್ಷಮಿಸಿ” ಎಂದು ಆತ್ಮಹತ್ಯೆಗೆ ಶರಣಾದ ದಂಪತಿ