ಅಖಂಡ ಕರ್ನಾಟಕ ಬಂದ್: ಸಕ್ಕರೆನಗರಿಯಲ್ಲಿ ‌ಬೆಂಬಲ

ಮಂಡ್ಯ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಕ್ಕರೆನಗರಿ ಮಂಡ್ಯದಲ್ಲಿ ‌ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ನೀಡಿದ್ದಾರೆ.
ಬೆಳಿಗ್ಗೆಯಿಂದ ಅಂಗಡಿಗಳು ಓಪನ್ ಆಗಲಿಲ್ಲ, ಮತ್ತೊಂದು ಕಡೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದವು, ಮಂಡ್ಯದ ಸಂಜಯ ಸರ್ಕಲ್‌ನಲ್ಲಿ ಪ್ರತಿಭಟನೆ ಜೋರಾಗಿತ್ತು, ಇನ್ನು ಬಂದ್‌ಗೆ KSRTC ನೌಕರರ ಸಾಥ್ ನೀಡಿದ್ದಾರೆ, ಹೋರಾಟಗಾರರಿಂದ ಬೈಕ್ ಜಾಥಾ ನಡೆದವು.