ಅಕ್ರಮ ವಿದ್ಯುತ್ ಸಂಪರ್ಕ: ಬೆಸ್ಕಾಂಗೆ 68 ಸಾವಿರ ದಂಡ ಪಾವತಿಸಿದ ಕುಮಾರಸ್ವಾಮಿ

0
11

ಬೆಂಗಳೂರು: ದೀಪಾವಳಿಗೆಂದು ಮನೆಗೆ ದೀಪಾಲಂಕಾರ ಮಾಡಲು ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಎಳೆದ ಆರೋಪಕ್ಕೆ ಬೆಸ್ಕಾಂ 68 ಸಾವಿರ ರೂ. ದಂಡ ವಿಧಿಸಿದೆ.
ಈ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1 ಯೂನಿಟ್‌ ವಿದ್ಯುತ್‌ಗೆ 3 ಪಟ್ಟು ದಂಡ ವಿಧಿಸಿದ್ದಾರೆ. ಒಟ್ಟು 2,526 ರೂಪಾಯಿ ದಂಡ ಹಾಕಬೇಕಿತ್ತು. ಆದರೆ ನನ್ನ ಮನೆಗೆ ತೆಗೆದುಕೊಂಡಿರುವ 33 kV ವಿದ್ಯುತ್‌ ಬಳಕೆ ಸೇರಿ 68,526 ರೂ. ದಂಡ ವಿಧಿಸಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ನನ್ನನ್ನ ಕಳ್ಳ ಕಳ್ಳ ಎಂದು ಕರೆಯುತ್ತಾರೆ. ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದಕ್ಕೆ ಬಿಲ್ ಹಾಕ್ತಾರಾ? ನನ್ನನ್ನು ಕಳ್ಳ ಎಂದು ಹೇಳುವುದನ್ನು ಬಿಡಿ. ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ. ನೀವು ಹಗಲು ದರೋಡೆಕೋರರು. ನಾನು ದಂಡ ಕಟ್ಟಿದ್ದೇನೆ. ನೀವು ಲುಲು ಮಾಲ್ ಕರೆಂಟ್ ಕಳ್ಳತನದ ಬಗ್ಗೆ ತನಿಖೆಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಸವಾಲು ಎಸೆದರು. ಮಾಜಿ ಸಿಎಂ ಆಗಿ ನನ್ನ ಪರಿಸ್ಥಿತಿಯೇ ಹೀಗೆ. ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಪ್ರತಿ ವರ್ಷ ಮಾಡುವ ಕನಕಪುರ ಉತ್ಸವಕ್ಕೆ ಎಲ್ಲಿಂದ ಕರೆಂಟ್ ಬಳಕೆ ಆಗುತ್ತದೆ? ಕಾಂಗ್ರೆಸ್​ನವರು ಪಾದಯಾತ್ರೆ ಮಾಡಿದಾಗ ಎಲ್ಲಿಂದ ಕರೆಂಟ್ ತೆಗೆದುಕೊಂಡಿದ್ದರು. ಕನಕಪುರ ಉತ್ಸವಕ್ಕೆ ಇಡಿ ಊರಿಗೇ ಜನರೇಟರ್ ಹಾಕ್ತಾರಾ” ಎಂದು ಪ್ರಶ್ನಿಸಿದ್ದಾರೆ.

Previous articleಉತ್ತರಕಾಶಿ ಸುರಂಗ ಕುಸಿತ: 6ನೇ ದಿನವೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ
Next articleಧಾಮನೆ ಅರಣ್ಯ ವಲಯದಲ್ಲಿ ಆನೆಗಳ ಕಾಟ: ಅರಣ್ಯಾಧಿಕಾರಿಗಳು ಮೌನ..!!