ಅಕ್ರಮಿಸಿಕೊಂಡ ವಕ್ಫ್ ಜಾಗ ಪೊಲೀಸ್ ಭದ್ರತೆಯೊಂದಿಗೆ ತೆರವು

ರಾಯಚೂರು: ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮುಂಭಾಗದ ಹಾಶ್ಮಿಯಾ ಮೈದಾನದಲ್ಲಿ ವಕ್ಫ್ ಜಾಗದಲ್ಲಿ ನಿರ್ಮಿಸಲಾಗಿರುವ ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಗುಲ್ಬರ್ಗಾ ವಕ್ಫ್‌ ಟ್ರಿಬ್ಯೂನಲ್ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬುದವಾರ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು.
ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಅಲ್ಲಿಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೈದಾನದಲ್ಲಿ 36 ಕುಟುಂಬಗಳು ವಾಸವಾಗಿವೆ. ಅನೇಕ ವರ್ಷಗಳಿಂದ ವಾಸಮಾಡುತ್ತಿದ್ದಾರೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 5 ದಿನಗಳ ಹಿಂದೆ ಮೌಖಿಕ, ಲಿಖಿತ ನೋಟೀಸ್ ನೀಡಿದ್ದರೂ ಮನೆಗಳನ್ನು ಖಾಲಿ ಮಾಡದ ಕಾರಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಏಕಾಏಕಿ ಜಾಗ ಖಾಲಿ ಮಾಡುವಂತೆ ಸೂಚಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಸಮಸ್ಯೆಯನ್ನು ಸಂತ್ರಸ್ಥರು ತೋಡಿಕೊಂಡರು.