ಕಲಬುರಗಿ : ಕಲಬುರಗಿಯ ರಿಂಗ್ ರೋಡ್ ಬಳಿಯ ತಾಜ್ ನಗರದಲ್ಲಿ 104 ಕ್ವಿಂಟಾಲ್ ಅಕ್ರಮ ಅಕ್ಕಿ ಸಮೇತ ಲಾರಿ ಜಪ್ತಿ ಮಾಡಲಾಗಿದ್ದು, ಲಾರಿ ಚಾಲಕ ವಿರೇಶ್ ಅವರನ್ನು ಬಂಧನ ಮಾಡಲಾಗಿದೆ.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ಗೆ ಸೇರಿದ ಅಕ್ಕಿ ಎಂದು ಚಾಲಕ ಬಾಯ್ಬಿಟಿದ್ದಾನೆ. ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ದಾಳಿ ಮಾಡಿ ಜಪ್ತಿ ಮಾಡಲಾಗಿದೆ. ಈ ಕುರಿತು
ಕಲಬುರಗಿಯ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.