ಅಂಬೇಡ್ಕರ್ ಪತ್ರ ಬಿಡುಗಡೆ: ಛಲವಾದಿ ನಾರಾಯಣಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದ ಖರ್ಗೆ

ಬೆಂಗಳೂರು: ಅಂಬೇಡ್ಕರ್ ಬರೆದಿರುವ ಪತ್ರ ಬಿಡುಗಡೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಛಲವಾದಿ ನಾರಾಯಣಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯಲ್ಲಿ ಪರಿಷತ್ನ ವಿಪಕ್ಷ ನಾಯಕರ ಆಯ್ಕೆ ಮಾಡಬೇಕಾದ ಸನ್ನಿವೇಶ ಉದ್ಭವಿಸಿದೆ ಅನ್ನಿಸುತ್ತದೆ. ಹಲವಾರು ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಸದನದಲ್ಲಿ ಅಂಬೇಡ್ಕರ್ ಸೋಲಿಸಿದ್ದವರ ಬಗ್ಗೆ ಚರ್ಚೆ ಆಯ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಸೋಲಿಗೆ ವೀರ ಸಾವರ್ಕರ್ ಕಾರಣ ಅಂತ ಹೇಳಿದ್ದೆ. ವಿಪಕ್ಷ ನಾಯಕರು ನನ್ನ ಮೇಲೆ‌ ಮುಗಿಬಿದ್ದರು. ನನ್ನ ಸೋಲಿಗೆ ಕಾರಣ ಸಾವರ್ಕರ್ ಸಂಚು ಅಂತ ಅಂಬೇಡ್ಕರ್ ಪತ್ರದಲ್ಲಿ ಬರೆದಿದ್ದಾರೆ. ಅಂಬೇಡ್ಕರ್ ಬರೆದಿದ್ದ ಪತ್ರದಲ್ಲಿ ಅದು ಇತ್ತು. ನಾನು ಸದನದಲ್ಲಿ ಆ ಪತ್ರ ಓದಿದ್ದೇನೆ‌. ಯಾರೂ ನಂಬ್ತಿಲ್ಲ. ಕಾಂಗ್ರೆಸ್ನವರು ಸುಳ್ಳು ಹೇಳ್ತಿದ್ದಾರೆ,
ಕಾಂಗ್ರೆಸ್ ನಾಯಕರು ಬಾಬಾಸಾಹೇಬ್ ಅಂಬೇಡ್ಕರ್ ರವರ ಸೋಲಿನ ಸಂಬಂಧ ತಮ್ಮ ಮಾತನ್ನು ಸಾಬೀತುಪಡಿಸಿದರೆ ನನ್ನ ಸ್ವಂತ ವೇತನದಲ್ಲಿ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ. ಒಂದು ವೇಳೆ ಸಾಬೀತುಪಡಿಸುವಲ್ಲಿ ವಿಫಲರಾದರೆ ನಾಲ್ವರು ನಾಯಕರು ರಾಜೀನಾಮೆ ನೀಡಲು ಮತ್ತು ರಾಜಕೀಯದಿಂದ ನಿವೃತ್ತಿ ನೀಡಲು ಸಿದ್ದರಿದ್ದಾರೆಯೇ? ಎಂದು ಛಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದ್ದರು, ಅಲ್ಲದೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಡಬಲ್ ಇಂಜಿನ್ ಸುಳ್ಳುಗಾರರು ಎಂದು ಸಹ ಹೇಳಿದ್ದರು. ಕಾಂಗ್ರೆಸ್ನವರು ಪ್ರೂವ್ ಮಾಡುವಂತೆಯೂ ಚಾಲೆಂಜ್‌ ಹಾಕಿದ್ದದ್ದರು. ದಾಖಲೆ ತೋರಿಸಿದರೆ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ ಅಂದಿದ್ದರು ಅದನ್ನು ನಮಗೆ ಕೊಡುವುದು ಬೇಡ, ತಲಾ ಒಬ್ಬರಂತೆ 1 ಲಕ್ಷ ಅಂದರೆ 4 ಲಕ್ಷವನ್ನು ಪಂಚಾಯತ್ ರಾಜ್ ಕಮಿಷನರ್ಗೆ ಕೊಡಿ. 48 ಗಂಟೆಯೊಳಗೆ ಬಿಲ್ ಕಳಿಸುತ್ತೇನೆ. ಆ ಹಣದಿಂದ ಅರಿವು ಕೇಂದ್ರಕ್ಕೆ ಪುಸ್ತಕ ತೆಗೆದುಕೊಳ್ಳುತ್ತೇನೆ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ. ಛಲವಾದಿಯವರೇ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ರಾಜೀನಾಮೆ ಕೊಡಿ. ಈ ಎರಡು ಕೆಲಸ 24 ಗಂಟೆಯೊಳಗೆ ಮಾಡಿ. ಬಿಜೆಪಿ ನಾಯಕರಿಗೆ ಅಲ್ಲಿ ಇರುವ 313 ಪೇಪರ್ಗಳನ್ನು ಓದಲು ಬರುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ನಿಮಗೆ ಇತಿಹಾಸ ತಿಳಿಯುವ ಆಸಕ್ತಿ ಇಲ್ಲ, ಯೋಗ್ಯತೆಯೂ ಇಲ್ಲ. ಬಾಬಾ ಸಾಹೇಬರ ಸ್ವಂತ ಕೈಬರಹದಲ್ಲಿ ಇರುವ ಪತ್ರದಲ್ಲಿ ಡಾಂಗೆ ಮತ್ತು ಸಾವರ್ಕರ್ ಸೇರಿ ತಮ್ಮ ಸೋಲಿಗೆ ಸಂಚು ನಡೆಸಿದ್ದರ ಬಗ್ಗೆ ನೇರವಾಗಿ ವಿವರಿಸಿದ್ದಾರೆ. ಸಾಕ್ಷಿ ಕೇಳುತ್ತಿದ್ದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಾಕ್ಷಿ ನೀಡಿದ್ದೇನೆ. ಅವರು ತಮ್ಮ ಮಾತಿಗೆ ಬದ್ಧರಾಗಿ ನಡೆದುಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.