ಅಂತಾರಾಷ್ಟ್ರೀಯ ಕುಸ್ತಿ ಪಂದ್ಯ: ಲಕ್ಕುಂಡಿಯ ರಮೇಶ ಚಾಂಪಿಯನ್

0
6

ಗದಗ(ಲಕ್ಕುಂಡಿ): ನೇಪಾಳದಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇಲ್ಲಿಯ ಗ್ರಾಪಂ ಸದಸ್ಯ ರಾಜ್ಯಮಟ್ಟದ ಕುಸ್ತಿಪಟು ರಮೇಶ ಭಾವಿ ಅವರಿಗೆ ಬಂಗಾರದ ಪದಕ ದೊರೆತಿದೆ.
ಭಾರತದಿಂದ ಪ್ರತಿನಿಧಿಸಿದ್ದ ರಮೇಶ ನೇಪಾಳದಲ್ಲಿ ಅಂತರಾಷ್ಟ್ರೀಯ ಯುಥ್ ಕ್ರೀಡಾಕೂಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದಿದ್ದಾರೆ. ಅಂತಿಮ ಪಂದ್ಯದಲ್ಲಿ ನೇಪಾಳದ ಕುಸ್ತಿಪಟು ನಿರ್ಮಲ್ ಅವರ ವಿರುದ್ಧ ಸ್ಪರ್ಧೆ ನಡೆದಿತ್ತು. ತೀವ್ರ ಹಣಾಹಣಿಯಲ್ಲಿ ರಮೇಶ ೧೦ ಅಂಕ ಮತ್ತು ನಿರ್ಮಲ್ ಅವರು ೮ ಅಂಕಗಳನ್ನು ಪಡೆದ ಹಿನ್ನೆಲೆಯಲ್ಲಿ ೨ ಅಂಕಗಳಿಂದ ರಮೇಶ ಅವರು ಜಯಶಾಲಿಯಾಗಿ ಬಂಗಾರದ ಪದಕ ಪಡೆದಿದ್ದಾರೆ.
೫೦ ವರ್ಷದ ವಯೋಮಿತಿಯಲ್ಲಿ ೯೬ ಕೆಜಿ ತೂಕದ ಕುಸ್ತಿ ಸ್ಪರ್ಧೆ ನಡೆದಿತ್ತು. ಅಂತರಾಷ್ಟ್ರೀಯ ಯುವ ಕ್ರೀಡೆ ಮತ್ತು ಶಿಕ್ಷಣ ಸಂಸ್ಥೆ ಮತ್ತು ಯುಥ್ ಸ್ಪೋರ್ಟ್ಸ ಡವಲಪ್‌ಮೆಂಟ್ ಪೋರಮ್ ನೇಪಾಳ ಇವರ ಆಶ್ರಯದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

Previous article‘ಕಾಪಿಕಾಡ್’ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ..!
Next articleಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಚಾಲನೆ