೫೬ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

0
23

ಸಂ. ಕ. ಸಮಾಚಾರ, ಮಂಗಳೂರು: ಮಂಗಳೂರು ಭರ್ಜರಿ ಸರ್ಜರಿಗೆ ಮುಂದಾಗಿರುವ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ೫೬ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಆಗಮನದ ವೇಳೆ ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿ ಬದಲಾವಣೆಯ ಬಗ್ಗೆಯೂ ಸಾರ್ವಜನಿಕವಾಗಿ ಬೇಡಿಕೆ ವ್ಯಕ್ತ ವಾಗಿತ್ತು. ಇದೀಗ ಪೊಲೀಸ್ ಕಮಿಷನರ್ ೫೬ ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶಿಸಿದ್ದಾರೆ.
ವರ್ಗಾವಣೆಗೊಂಡಿರುವವರಲ್ಲಿ ಸಿಸಿಬಿ, ಸೆನ್ ಸೇರಿದಂತೆ ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ ಠಾಣೆಗಳ ಹಲವು ಪೊಲೀಸರು ಸೇರಿದ್ದಾರೆ.

Previous articleಗರ್ಭಿಣಿ ಪತ್ನಿ ಕೊಂದು ಪತಿ ಆತ್ಮಹತ್ಯೆ
Next articleಧರ್ಮಾಧಾರಿತ ಮೀಸಲಾತಿಯಿಂದ ಸಂವಿಧಾನದ ಆಶಯವೇ‌ ಬುಡಮೇಲು