೨೬, ೨೭ರಂದು ಉದ್ಯೋಗ ಮೇಳ

0
8

ಬೆಂಗಳೂರು: ಯುವ ಸಮೃದ್ಧಿ ಸಮ್ಮೇಳನದ ರಾಜ್ಯಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳ ಹೆಸರು ನೋಂದಣಿ ಹಾಗೂ ಪಾಲ್ಗೊಳ್ಳುವ ಕುರಿತು ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಅರಮನೆ ಮೈದಾನದಲ್ಲಿ ಫೆ. ೨೬, ೨೭ರಂದು ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಲು ತಿರ್ಮಾನಿಸಲಾಗಿದೆ. ಬೃಹತ್ ಉದ್ಯೋಗ ಮೇಳದಲ್ಲಿ ರಾಜ್ಯದ ಯುವ ಜನತೆಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಉಪಯುಕ್ತವಾಗುವಂತೆ ಮತ್ತು ಆಸಕ್ತ ಯುವಜನತೆಯು ಸ್ವಯಂ ಉದ್ಯೋಗಿಗಳಾಗಲು ಹಾಗೂ ಸ್ವಾವಲಂಬಿಗಳಾಗಲು ಅರಿವು ಮೂಡಿಸಿ, ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಪ್ಲೇಸ್‌ಮೆಂಟ್ ಅಧಿಕಾರಿಗಳು ಹಾಗೂ ಪದವಿ ಮುಗಿಸಿ ಹೊರಗುಳಿದಿರುವ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಲು ಸೂಚಿಸಲಾಗಿದೆ.

Previous articleಕಾಡಾನೆಗೆ ಪರ್ಮಿಟ್ ಬೇಕೇ…
Next articleನಾಲಗೆಯ ತುದಿಯಲ್ಲಿ ಕನ್ನಡ ನಲಿಯಲಿ