೧೫ ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

0
15
ಕೋಟ್ಯಾಂತರ ಮೌಲ್ಯದ ಗಾಂಜಾ ವಶ
ಗಾಂಜಾ ವಶ

ಬೀದರ್: ಔರಾದ್ ತಾಲ್ಲೂಕಿನ ವನಮಾರಪಪಳ್ಳಿ ಬಳಿ ಭಾನುವಾರ ಲಾರಿಯಲ್ಲಿದ್ದ ಸುಮಾರು ೧೫ ಕೋಟಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.
ಮಾದಕ ವಸ್ತುಗಳ ಸಾಗಣೆ ಮತ್ತು ಬಳಕೆ ಪ್ರತಿಬಂಧಕ ಬೆಂಗಳೂರು ದಳದ ಸಿಬ್ಬಂದಿ ಹಾಗೂ ಬೀದರ್‌ನ ಮಾದಕ ವಸ್ತುಗಳ ಪ್ರತಿಬಂಧಕ ದಳದ ಪೊಲೀಸ್ ಇನ್ಸ್‌ಪೆಕ್ಟರ್ ರಘುವೀರ್ ಸಿಂಗ್ ಮತ್ತು ಅವರ ತಂಡ ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ವನಮಾರಪಪಳ್ಳಿ ಬಳಿ ಲಾರಿಯನ್ನು ತಡೆದು ಅದರಲ್ಲಿದ್ದ ಅಂದಾಜು ೧೫ ಕೋಟಿ ರೂ.‌ ಬೆಲೆಯ ೧,೫೦೦ ಕೆಜಿ ತೂಕದ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಹೊಸದುರ್ಗದಲ್ಲಿ ಕರಡಿ ಪ್ರತ್ಯಕ್ಷ
Next articleಅನಿಲ ಸೋರಿಕೆ: ಒಬ್ಬ ಸಾವು