ಹೋಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಪತ್ರ

0
21

ಬೆಂಗಳೂರು: ಪೋಸ್ಟ್‌ ಮೂಲಕ ಜಾಲಹಳ್ಳಿಯ ಕದಂಬ ಹೋಟೆಲ್ ಹಾಗೂ ದಾಸರಹಳ್ಳಿಯ ಸ್ವಾತಿ ಹೋಟೆಲ್‌ ಎರಡು ಕಡೆ ಬಾಂಬ್ ಇಟ್ಟಿದ್ದೇವೆ ಎಂದು ಅನಾಮಿಕ ಪತ್ರ ಬಂದಿದೆ.
ಮಧ್ಯಾಹ್ನ 12ರ ಸುಮಾರಿಗೆ ಪೋಸ್ಟ್‌ ಮುಖಾಂತರ ಬೆದರಿಕೆ ಪತ್ರವು ಹೋಟೆಲ್‌ ಸಿಬ್ಬಂದಿ ಕೈಸೇರಿದ್ದು ಈ ಹಿನ್ನೆಲೆಯಲ್ಲಿ ಪೋಸ್ಟ್‌ ಮೂಲಕ ಬಂದಿರುವ ಬೆದರಿಕೆ ಪತ್ರವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಹಕರು ಹಾಗೂ ಹೋಟೆಲ್‌ ಸಿಬ್ಬಂದಿಯನ್ನು ಹೊರಗೆ ಕಳಿಸಿ ಹೋಟೆಲ್‌ನೊಳಗೆ ಜಾಲಹಳ್ಳಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

Previous articleನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಸ್ವಾಮೀಜಿ
Next articleವಿಕಸಿತ ಭಾರತ ಎನ್ನುವ ಸುಳ್ಳಿನ ಪ್ರಚಾರಕ್ಕೂ ಸೋಲಾಗುತ್ತದೆ