ತಾಲ್ಲೂಕಿನ ಮಂಗಳಾಪುರ ಗ್ರಾಮದ ಮೃತಪಟ್ಟ ಮೂವರ ಮೃತ ದೇಹಗಳಿಗೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಶನಿವಾರ ಹೂವಿನ ಹಾರ ಹಾಕಿ, ಅಂತಿಮ ದರ್ಶನ ಪಡೆದರು.
ಹುಬ್ಬಳ್ಳಿಯ ಹೆಸಬೂರು ಬಳಿಯ ಅಪಘಾತದಲ್ಲಿ ಶುಕ್ರವಾರ ಅಜ್ಜ ಜಾಫರ್ ಸಾಬ್, ಮಗ ಮಹಮ್ಮದ್ ಮುಸ್ತಫಾ, ಮೊಮ್ಮಗ ಶೋಯಬ್ ಮೃತಟ್ಟಿದ್ದಕ್ಕೆ ಮೃತರ ಆತ್ಮಗಳಿಗೆ ಶಾಂತಿ ನೀಡಬೇಕು ಎಂದು ಸಂತಾಪ ಸೂಚಿಸಿದರು. ಕುಟುಂಬಸ್ಥರಿಗೆ ಸಾಂತ್ವಾನ ಹೇಳುವ ಮೂಲಕ ಧೈರ್ಯ ತುಂಬಿದರು.