Home Advertisement
Home ತಾಜಾ ಸುದ್ದಿ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

0
105

ಟೆಹ್ರಾನ್: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮೃತಪಟ್ಟಿದ್ದಾರೆ.

ರವಿವಾರ ಅಜರ್‌ಬೈಜಾನ್‌ ನಿಂದ ಮರಳುತ್ತಿದ್ದ ಇರಾನ್ ಅಧ್ಯಕ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೇನ್‌ ಅಮೀರಬ್‌ ದೊಲ್ಲಾಹಿಯನ್‌ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿತ್ತು.

ಇಂದು ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿದ್ದು ಅದರಲ್ಲಿದ್ದ ಇರಾನ್ ಅಧ್ಯಕ್ಷ ರೈಸಿ ಮತ್ತು ವಿಮಾನದಲ್ಲಿದ್ದ ಇರಾನ್ ವಿದೇಶಾಂಗ ಸಚಿವರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.ರವಿವಾ ಪರ್ವತಗಳಲ್ಲಿ ಪತನಗೊಂಡ ಹೆಲಿಕಾಪ್ಟರ್‌ ನ ಅವಶೇಷಗಳನ್ನು ರಕ್ಷಣಾ ತಂಡ ಪತ್ತೆ ಮಾಡಿದೆ.