ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

0
13

ಶ್ರೀರಂಗಪಟ್ಟಣ: ಚಲಿಸುತ್ತಿದ್ದ ಡಸ್ಟರ್ ಕಾರೊಂದು ಇಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಧಗಧಗನೆ ಹೊತ್ತಿ ಉರಿದಿದೆ. ಪಿರಾನ್ ಎಂಬುವವರಿಗೆ ಸೇರಿದ ಕಾರು ಬೆಂಗಳೂರಿನಿಂದ ಕೇರಳದ ಮಲಪ್ಪುರಂಗೆ ತೆರಳುತ್ತಿದ್ದ ವೇಳೆ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರದ ಬಳಿ ಕಾರಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಸುಟ್ಟು ಕರುಕಲಾಗಿದೆ.
ಮೂವರು ಮಕ್ಕಳೊಂದಿಗೆ ಪಿರಾನ್ ತೆರಳುತ್ತಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಮಕ್ಕಳೊಂದಿಗೆ ಕೆಳಗಿಳಿದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ನಂದಿಸಲು ಸ್ಥಳೀಯರಿಂದ ಹರಸಾಹಸ ಪಟ್ಟರಾದರೂ, ಅಗ್ನಿಶಾಮಕ ದಳದ ಸಿಬ್ಬಂಧಿ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Previous articleತಮಿಳುನಾಡು ರಾಜ್ಯಪಾಲರ ಕ್ರಮ: ಚರ್ಚೆಗೆ ಹಾದಿ
Next articleಜಾತೀಯತೆ ಮೋಹವೂ ಬೆಳೆದಷ್ಟು ಅಪಾಯಕಾರಿ