ಹೂಗ್ಲಿ ನದಿಯೊಳಗಿನ ಮೆಟ್ರೋ ಸುರಂಗಮಾರ್ಗಕ್ಕೆ ಇಂದು ಚಾಲನೆ

0
22

ನವದೆಹಲಿ: ಕೋಲ್ಕತಾದಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ನದಿಯೊಳಗಿನ ಸುರಂಗಮಾರ್ಗವನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಹೂಗ್ಲಿ ನದಿಯೊಳಗೆ ಸಾಗುವ ಈ ಸುರಂಗ ಮಾರ್ಗವು ಹೌರಾ ಮೈದಾನ ಮತ್ತು ಎಸ್‌ಪ್ಲಾನೇಡ್ ಮೆಟ್ರೋ ವಿಭಾಗ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಈ ಜಲಸುರಂಗ ಮಾರ್ಗ ಮಾತ್ರವಲ್ಲದೆ, ಕವಿ ಸುಭಾಸ್-ಹೇಮಂತ ಮುಖ್ಯೋಪಾಧ್ಯಾಯ ಮತ್ತು ತಾರಾತಲಾ-ಮಜೆರ್‌ಹಟ್ ಮೆಟ್ರೋ ವಿಭಾಗಗಳಿಗೂ ಪ್ರಧಾನಿ ನಾಳೆ ಚಾಲನೆ ನೀಡಲಿದ್ದಾರೆ.

Previous articleನಿಷ್ಠೆ ಮತ್ತು ಶ್ರದ್ಧೆ ಇದ್ದಲ್ಲಿ ಲಕ್ಷ್ಮೀ ಸನ್ನಿಧಾನ
Next articleಶಹಜಹಾನ್ ಹಸ್ತಾಂತರಕ್ಕೆ ನಕಾರ