ಗದಗ:ಸಮೀಪದ ಹುಲಕೋಟಿ ಬಳಿ ಕಾರು ರಸ್ತೆ ಡಿವೈಡರಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮಹ್ಮದ್ ಜಾಯಿದ್ 18, ಸಂಜೀವ ಗಿರಡ್ಡಿ 15 ಮೃತ ದುರ್ದೈವಿಗಳು. ಆಶೀಶ್ ಗುಡುರ್, ಚಾಲಕ ಸಪ್ತಗಿರಿ ಎಂಬುವರಿಗೆ ಗಂಭೀರ ಗಾಯವಾಗಿದೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.