ಹುಬ್ಬಳ್ಳಿ: ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ

0
40

ಹುಬ್ಬಳ್ಳಿ: ಕೆಲ ನಿರ್ದಿಷ್ಟ ಮಾರ್ಗಗಗಳಲ್ಲಿ ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.
ರೈಲುಗಳು ರದ್ದು : ರೈಲು ಸಂಖ್ಯೆ ೦೭೩೪೯ / ೦೭೩೫೦ ಶಿವಮೊಗ್ಗ ಟೌನ್ – ತಾಳಗುಪ್ಪಾ – ಶಿವಮೊಗ್ಗ ಟೌನ್ ಪ್ಯಾಸೆಂಜರ್ ರೈಲುಗಳನ್ನು ಜುಲೈ ೭, ೨೦೨೩ ರಂದು ಎಂಜಿನಿಯರಿAಗ್ ಕಾಮಗಾರಿ ಸಲುವಾಗಿ ೧೧:೩೦ ರಿಂದ ಮಧ್ಯಾಹ್ನ ೦೩:೩೦ ರವರೆಗೆ ಶಿವಮೊಗ್ಗ ಮತ್ತು ಕುಂಸಿ ವಿಭಾಗಗಳ ನಡುವೆ ರದ್ದುಗೊಳಿಸಲಾಗುತ್ತಿದೆ.
ಭಾಗಶಃ ರದ್ದು: ಮಿಲವಿಟ್ಟನ್-ಟುಟಿಕೋರಿನ್ ವಿಭಾಗದ ನಡುವಿನ ಜೋಡಿ ಮಾರ್ಗದ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲು ದಕ್ಷಿಣ ರೈಲ್ವೆಯು ಸೂಚನೆ ನೀಡಿದೆ.
ಜುಲೈ ೧೦ ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೬೨೩೬ ಮೈಸೂರು – ಟುಟಿಕೋರಿನ್ ಎಕ್ಸ್ಪ್ರೆಸ್ ರೈಲನ್ನು ವಂಚಿ ಮಣಿಯಾಚಿ- ಟುಟಿಕೋರಿನ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಜುಲೈ ೧೧ ರಂದು ಟುಟಿಕೋರಿನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೬೨೩೫ ಟುಟಿಕೋರಿನ್ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಟುಟಿಕೋರಿನ್ – ವಂಚಿ ಮಣಿಯಾಚಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಪ್ರಾಯೋಗಿಕ ನಿಲುಗಡೆಗೆ ಅವಕಾಶ : ಪ್ರಾಯೋಗಿಕ ಆಧಾರದ ಮೇಲೆ ಈ ಕೆಳಗಿನ ರೈಲು ನಿಲ್ದಾಣಗಳಿಗೆ ನಿಲುಗಡೆ ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಸೂಚನೆ ನೀಡಿದೆ
ಜುಲೈ ೫ ರಂದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೨೨೯೫ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ – ದಾನಪುರ ಸಂಘಮಿತ್ರ ಎಕ್ಸ್ಪ್ರೆಸ್ ರೈಲು ರಾಮಗುಂಡA ನಿಲ್ದಾಣಕ್ಕೆ(೦೨:೦೯/೦೨:೧೦ಂಒ) ಆಗಮಿಸಿ ನಿರ್ಗಮಿಸಲಿದೆ.
ಜುಲೈ ೭ ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೨೫೭೮ ಮೈಸೂರು – ದರ್ಭಾಂಗ ಭಾಗಮತ್ ಎಕ್ಸ್ಪ್ರೆಸ್ ರೈಲು ರಾಮಗುಂಡA ನಿಲ್ದಾಣಕ್ಕೆ (೦೬:೪೪/೦೬:೪೫ಂಒ) ಆಗಮಿಸಿ/ ನಿರ್ಗಮಿಸಲಿದೆ.
ಜುಲೈ ೬ ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೭೨೧೨ ಯಶವಂತಪುರ – ಮಚಿಲಿಪಟ್ಟಣಂ ಎಕ್ಸ್ಪ್ರೆಸ್ ರೈಲು ಕುಂಬಮ್ ನಿಲ್ದಾಣಕ್ಕೆ (೦೦:೦೪/೦೦:೦೫ಂಒ) ಆಗಮಿಸಿ/ ನಿರ್ಗಮಿಸಲಿದೆ.
ಜುಲೈ ೭ ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೬೫೬೯ ಯಶವಂತಪುರ -ಕಾಚಿಗುಡಾ ಎಕ್ಸ್ಪ್ರೆಸ್ ರೈಲು ಶ್ರೀರಾಮನಗರ, ಜಡ್ಚರ್ಲಾ ಮತ್ತು ಶಾದ್‌ನಗರ ನಿಲ್ದಾಣಗಳಿಗೆ ಕ್ರಮವಾಗಿ (೧೧:೪೪/೧೧:೪೬Pಒ, ೦೧:೧೭/೦೧:೧೮ಂಒ ಮತ್ತು ೦೧:೪೩/೦೧:೪೪ಂಒ) ಆಗಮಿಸಿ/ ನಿರ್ಗಮಿಸಲಿದೆ ಎಂದು ತಿಳಿಸಲಾಗಿದೆ.
ಜುಲೈ ೫ ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೧೭೬೦೪ ಯಶವಂತಪುರ – ಕಾಚಿಗುಡಾ ಎಕ್ಸ್ಪ್ರೆಸ್ ರೈಲು ಶಾದ್‌ನಗರ ನಿಲ್ದಣಕ್ಕೆ(೦೩:೨೫/೦೩:೨೬ ಂಒ) ಆಗಮಿಸಿ/ ನಿರ್ಗಮಿಸಲಿದೆ ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleಆರೆಂಜ್ ಅಲಟ್೯: ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ
Next articleಮುಂದುವರಿದ ಮಳೆ: ಉಡುಪಿ ಜಿಲ್ಲಾ ಶಾಲಾ ಕಾಲೇಜಿಗೆ ರಜೆ