ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಪುನರಾರಂಭ

0
34

ಹುಬ್ಬಳ್ಳಿ : ಈ ಮೊದಲು ಕಾರ್ಯಾಚರಣೆಯ ಕಾರಣಾಂತರಗಳಿಂದ ರದ್ದುಗೊಳಿಸಲಾಗಿದ್ದ ಹುಬ್ಬಳ್ಳಿ-ರಾಮೇಶ್ವರಂ ನಡುವಿನ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಪುನರಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮೊದಲು ಏಪ್ರಿಲ್ 26, 2025 ರವರೆಗೆ ರದ್ದುಗೊಳಿಸಲಾಗಿತ್ತು. ಈಗ ಏಪ್ರಿಲ್ 12, 2025 ರಿಂದ ಜೂನ್ 28, 2025 ರವರೆಗೆ ಪುನರಾರಂಭಿಸಲಾಗುತ್ತದೆ.
ರೈಲು ಸಂಖ್ಯೆ 07356 ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮೊದಲು ಏಪ್ರಿಲ್ 27, 2025 ರವರೆಗೆ ರದ್ದುಗೊಳಿಸಲಾಗಿತ್ತು. ಈಗ ಏಪ್ರಿಲ್ 13, 2025 ರಿಂದ ಜೂನ್ 29, 2025 ರವರೆಗೆ ಪುನರಾರಂಭಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Previous articleನಕಲಿ ಚಿನ್ನ ಅಡವಿಟ್ಟು ವಂಚಿಸಿದ ಆರೋಪಿ ಬ್ಯಾಂಕ್‌ನ ವ್ಯವಸ್ಥಾಪಕನ ಬಂಧನ
Next articleವಿಷ ಸೇವಿಸಿ ರೈತ ಆತ್ಮಹತ್ಯೆ