ಹುಬ್ಬಳ್ಳಿ ಜನಶತಾಬ್ದಿ: ಮಾರ್ಚ್ 1ರಿಂದ ಎರಡನೇ ಪ್ಲ್ಯಾಟ್ ಫಾರ್ಮ್‌ನಿಂದ ಸಂಚಾರ

0
18

ಹುಬ್ಬಳ್ಳಿ: ಮಾರ್ಚ್ ಒಂದರಿಂದ ಜನ ಶತಾಬ್ದಿ ರೈಲು ಎರಡನೇ ಪ್ಲ್ಯಾಟ್ ಫಾರ್ಮ್‌ನಿಂದ ಸಂಚರಿಸಲಿದೆ ಎಂದು
ಜನಶತಾಬ್ದಿ ರೈಲು ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರನೇ ದ್ವಾರದ ಆರನೇ ಪ್ಲ್ಯಾಟ ಫಾರ್ಮನಿಂದ ಸಂಚರಿಸುತ್ತಿತ್ತು. ಇದರಿಂದ ಹುಬ್ಬಳ್ಳಿಯ ಜನರಿಗೆ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು ಈ ಕರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರೈಲು ಸಂಖ್ಯೆ 12079/80 ಹುಬ್ಬಳ್ಳಿ-ಬೆಂಗಳೂರು- ಹುಬ್ಬಳ್ಳಿ ಮಧ್ಯ ಸಂಚರಿಸುವ ಜನ ಶತಾಬ್ದಿ ರೈಲು ಕಾರಣಾಂತರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರನೇ ದ್ವಾರದ ಆರನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸುತ್ತಿತ್ತು. ಹುಬ್ಬಳ್ಳಿಯ ಜನರಿಗೆ ಸಂಚಾರಕ್ಕೆ ಅತ್ಯಂತ ಪ್ರಮುಖ ರೈಲು ಇದಾಗಿದ್ದು, ಆರನೇ ಪ್ಲ್ಯಾಟ್ ಫಾರ್ಮ್, ಮೂರನೇ ದ್ವಾರದಿಂದ ಜನರಿಗೆ ಸಂಚರಿಸುವಲ್ಲಿ ತೊಂದರೆಯಾಗುತ್ತಿರುವುದನ್ನು ಗಮನಿಸಿ ನಾನು ಸಂಬಂಧ ಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಈ ರೈಲನ್ನು ನಿಲ್ದಾಣದ ಪ್ರಮುಖ ದ್ವಾರದಿಂದ ಚಲಿಸಿಲು ಸೂಚಿಸಿದ್ದು ಅದರಂತೆ ಬರುವ ಮಾರ್ಚ್ ಒಂದರಿಂದ ಜನ ಶತಾಬ್ದಿ ರೈಲು ಎರಡನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸಲಿದೆ. ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಸಂಚಾರದ ವ್ಯವಸ್ಥೆಯನ್ನು ಸುಗಮಗೊಳಿಸಿದ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Previous articleಸಂವಿಧಾನ ಅರಿವು ರಾಷ್ಟ್ರೀಯ ಆಂದೋಲನವಾಗಲಿ
Next articleಬಿಆರ್‌ಎಸ್ ಶಾಸಕಿ ಲಾಸ್ಯಾ ನಂದಿತಾ ರಸ್ತೆ ಅಪಘಾತದಲ್ಲಿ ಸಾವು