Home Advertisement
Home ಅಪರಾಧ ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ಮಧ್ಯಾಹ್ನ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ಮಧ್ಯಾಹ್ನ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

0
192

ಬೆಂಗಳೂರು : ಹುಬ್ಬಳ್ಳಿಯಲ್ಲಿ ಎನ್​​ಕೌಂಟರ್ ಆದ ಬಿಹಾರದ ರಿತೇಶ್‌ ಕುಮಾರ್‌ ಮೃತದೇಹದ ಶವಸಂಸ್ಕಾರಕ್ಕೆ ತಡೆ ನೀಡಬೇಕು ಹಾಗೂ ತುರ್ತಾಗಿ ವಿಚಾರಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಧ್ಯಾಹ್ನ 3:30ಕ್ಕೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಎನ್​​ಕೌಂಟರ್​ಗೆ ಗುರಿಯಾದ ರಿತೇಶ್ ಮೃತದೇಹವನ್ನು ಶವಸಂಸ್ಕಾರ ಮಾಡದಂತೆ ತಡೆ ನೀಡಬೇಕು ಎಂದು ಕೋರಿದರು. ಅರ್ಜಿ ಸಲ್ಲಿಸಲು ವಿಳಂಬವಾಗಿದೆ. ಎನ್​​ಕೌಂಟರ್ ಕುರಿತಂತೆ ಕೆಲವು ಸಂಶಯಗಳಿದ್ದು, ಮೃತದೇಹವನ್ನು ಶವಸಂಸ್ಕಾರ ಮಾಡಿದಲ್ಲಿ ಸಾಕ್ಷ್ಯಗಳ ನಾಶವಾಗಲಿದೆ. ಆದ ಕಾರಣ ಶವಸಂಸ್ಕಾರಕ್ಕೆ ತಡೆ ನೀಡಬೇಕು ಎಂದು ಕೋರಿದರು. ಹೈಕೋರ್ಟ್ ಪೀಠವು ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Previous articleಕಾಫಿನಾಡಿಗೆ ಮನಸೋತ ಫುಡ್‌ ವ್ಲಾಗರ್‌ ಕೃಪಾಲ್ ಅಮನ್ನಾ
Next articleಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ದಿಢೀರ್ ಭೇಟಿ