ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಕ್ಕೆ ಚಾಲನೆ

0
15

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಸ್ತುತ ಪಡಿಸಿರುವ ಸಂಸದ ಸಾಂಸ್ಕ್ರತಿಕ ಮಹೋತ್ಸವದ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಚಿತ್ರ ಬಿಡಿಸುವ ಮೂಲಕ ಜೆ.ಎಸ್‌.ಎಸ್. ಸಂಸ್ಥೆಯ ಗೌರವ ಕಾರ್ಯದರ್ಶಿ ಅಜಿತ್ ಪ್ರಸಾದ ಉದ್ಘಾಟಿಸಿದರು. ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ವಿ.ಎಸ್.ವಿ. ಪ್ರಸಾದ, ವಸಂತ ಹೊರಟ್ಟಿ, ಎಚ್‌. ನಂದಕುಮಾರ, ಗೋವಿಂದ ಜೋಶಿ, ರಂಗಾ ಬದ್ದಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಸಂದೀಪ ಬೂದಿಹಾಳ, ಸೇರಿದಂತೆ ಇತರರು ಇದ್ದರು.


ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಇದೇ ಜನವರಿ 27 ಮತ್ತು 28 ರಂದು ಹುಬ್ಬಳ್ಳಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವ ಇದ್ದು ಮಹೋತ್ಸವದ ಅಂಗವಾಗಿ ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇಂದು ಸಂಜೆ 6:30ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಇರಲಿದೆ

ಸ್ಥಳ: ಆಕ್ಸ್ಫರ್ಡ್ ಕಾಲೇಜು ಹತ್ತಿರ, ಕುಸುಗಲ್ ರಸ್ತೆ, ಕೇಶ್ವಾಪುರ, ಹುಬ್ಬಳ್ಳಿ

ಬಾನಲ್ಲಿ ದರ್ಶನ ತೋರಿದ ಪ್ರಭು ಶ್ರೀರಾಮ

Previous articleಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ
Next articleಮರಾಠ ಮೀಸಲಾತಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು