ಹುಬ್ಬಳ್ಳಿಯಲ್ಲಿ ಬೆಂಕಿ ಅವಘಡ

0
15

ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ಹೋಟೆಲ್ ನಲ್ಲಿ ತಡರಾತ್ರಿ ಆಕಸ್ಮೀಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಹೋಟೆಲ್ ಮತ್ತು ಎಟಿಎಂ ಕೇಂದ್ರಕ್ಕೆ ಹಾನಿಯಾಗಿದೆ. ಎಲ್ಲೋರಾ ಹೋಟೆಲ್ ಹಾಗೂ ಲಕ್ಷ್ಮೀ ವಿಲಾಸ ಬ್ಯಾಂಕ್ ಎಟಿಎಂ ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊಟೆಲ್ ಮತ್ತು ಎಟಿಎಂ ಸಾಮಾಗ್ರಿಗಳು ಸುಟ್ಟಿವೆ. ಕೂಡಲೇ ಅಗ್ನಿಶಾಮಕ‌ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ‌ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಬಾವುಟಗುಡ್ಡೆಯಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆ ಲೋಕಾರ್ಪಣೆ
Next articleಪಂಚರತ್ನ ರಥಯಾತ್ರೆ ಬಂಗಾರಪೇಟೆಯ ತಂಬಳ್ಳಿಗೆ