ಹಿಂದೂ ಸಮಾಜದ ಅತಿ ಶ್ರದ್ಧೆಯ ನಿಯಮಗಳನ್ನು ಹಾಳು ಮಾಡುವ ಕುತಂತ್ರ

0
31


ಸಂ.ಕ. ಸಮಾಚಾರ, ಮಂಗಳೂರು: ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಸಂದರ್ಭದಲ್ಲಿ ಹಿಂದೂ ಸಂಸ್ಕಾರವನ್ನು ಹೊಂದಿರುವ ಹಿಂದೂ ಮಕ್ಕಳಲ್ಲಿ ಜನಿವಾರವನ್ನು ತೆಗೆಯಬೇಕು, ಕಿತ್ತೆಸೆಯಬೇಕು ಎಂಬ ನಿಯಮವನ್ನು ಮಾಡಿಕೊಂಡು ಹಿಂದೂ ಸಮಾಜದ ಅತಿ ಶ್ರದ್ಧೆಯ ನಿಯಮಗಳನ್ನು ಹಾಳು ಮಾಡುವ ಕುತಂತ್ರಗಳು ನಡೆಯುತ್ತಿವೆ ಎಂದು ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ ಆರೋಪಿಸಿದ್ದಾರೆ.
ಇದನ್ನು ಕೇವಲ ಬ್ರಹ್ಮಣ ಸಮಾಜ ಮಾತ್ರವಲ್ಲ ಇಡೀ ಹಿಂದೂ ಸಮಾಜ ಖಂಡಿಸಬೇಕು. ಮತ್ತು ನಿರಂತರವಾಗಿ ಪ್ರತಿಭಟಿಸುವುದು ಮತ್ತು ಸರ್ಕಾರವನ್ನು ಎಚ್ಚರಿಸುವ ಕೆಲಸಗಳು ನಡೆಯಬೇಕು. ಒಂದು ಕಡೆಯಲ್ಲಿ ಹಿಜಾಬ್‌ಗೆ ಬೆಂಬಲ ಸೂಚಿಸುವ ಸರ್ಕಾರ ತಕ್ಷಣ ಕ್ರಮವನ್ನು ತೆಗೆಯಬೇಕಾದಲ್ಲಿ ಮೀನಾಮೇಷ ಎಣಿಸುತ್ತಿದೆ. ಹಿಂದೂ ಸಮಾಜದ ಮೇಲೆ ಇಂತಹ ದುರ್ಗಟನೆಗಳನ್ನು ಮಾಡಲು ಪ್ರೇರಣೆ ನೀಡುವುದು ಬಹಳ ಬೇಸರ ತರುತ್ತದೆ.
ಇಂದು ಬೀದರ್‌ನಲ್ಲಿ ಸಿಇಟಿ ಬರೀಕ್ಷೆ ಬರೆಯುವ ಮುಗುವಿನ ಜನಿವಾರವನ್ನು ತೆಗೆಯಲು ಹೇಳಿ ಪರೀಕ್ಷೆ ಬರೆಯಲು ಹೇಳಿದ್ದಾರೆ. ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ ಶಿಕ್ಷಣ ಸಚಿವರು ಯಾರು ಈ ಆಗ್ರಹವನ್ನು ಮಾಡಿದ್ದಾರೆ ಅವರನ್ನು ಅಮಾನತು ಗೊಳಿಸಬೇಕು ಹಾಗೂ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

Previous articleಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ರಸ್ತೆ ಬಂದ್ಮೂವರ ವಿರುದ್ಧ ಪ್ರಕರಣ
Next articleಬೀದರ್ ಜನಿವಾರ ಪ್ರಕರಣ: ಪ್ರಾಂಶುಪಾಲ, ದ್ವಿ.ದ. ಸಹಾಯಕ ಕೆಲಸದಿಂದ ವಜಾ