ಹಾವೇರಿ ಶೇ. 81, ಧಾರವಾಡ ಶೇ. 73ರಷ್ಟು ಮತದಾನ

0
20

ಹಾವೇರಿ ಜಿಲ್ಲೆಯಲ್ಲಿ ಅಂದಾಜು ಶೇ. 81.17ರಷ್ಟು ಶಾಂತಿಯುತ ಮತದಾನವಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ ಅಂದಾಜು ಶೇ. 83.17, ಶಿಗ್ಗಾವಿ ಕ್ಷೇತ್ರದಲ್ಲಿ ಶೇ.79.06, ಹಾವೇರಿ ಕ್ಷೇತ್ರದಲ್ಲಿ ಶೇ.76.61, ಬ್ಯಾಡಗಿ ಕ್ಷೇತ್ರದಲ್ಲಿ ಶೇ. 83.47, ಹಿರೇಕೆರೂರು ಕ್ಷೇತ್ರದಲ್ಲಿ ಶೇ.84.89 ಹಾಗೂ ರಾಣೆಬೆನ್ನೂರು ಕ್ಷೇತ್ರದಲ್ಲಿ ಶೇ.80.04 ರಷ್ಟು ಮತದಾನವಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ. 84.89ರಷ್ಟು ಹೆಚ್ಚು ಮತದಾನವಾದರೆ ಹಾವೇರಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ. 76.61ರಷ್ಟು ಮತದಾನ ದಾಖಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿದ್ದು, ಸಂಜೆ 6ರ ವರೆಗೆ ಶೇ. 73.19ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಸಂಜೆ 6 ಗಂಟೆ ನಂತರ ಮತಗಟ್ಟೆ ಆವರಣದಲ್ಲಿ, ಸರತಿ ಸಾಲಿನಲ್ಲಿದ್ದ ಮತದಾರರು ಕುಂದಗೋಳ, ನವಲಗುಂದ ಮತಕ್ಷೇತ್ರಗಳಲ್ಲಿ ಇನ್ನು ಮತದಾನ ಮಾಡುತ್ತಿದ್ದು, ಈಗ ಅಂತಿಮ ಹಂತಕ್ಕೆ ಬಂದಿದೆ‌‌ ಎಂದಿದ್ದಾರೆ.
ಮಂಡ್ಯ ಜಿಲ್ಲೆ ವಿಧಾನಸಭಾ ಕ್ಷೇತ್ರ ಸಂಜೆ 6 ಗಂಟೆಯವರೆಗೆ ಒಟ್ಟಾರೆ ಸರಾಸರಿ 82.30% ಮತದಾನವಾಗಿದೆ.

Previous articleಮತದಾನ ಕೇಂದ್ರದ ಆವರಣದಲ್ಲಿ ಮಗುವಿಗೆ ಜನ್ಮ
Next article107ನೇ ವಯಸ್ಸಿನಲ್ಲೂ ಕುಂದದ ಮತದಾನದ ಉತ್ಸಾಹ