ವಿದ್ಯಾಕಾಶಿ ಧಾರವಾಡದಲ್ಲಿ ಹಾಡಹಗಲೇ ಮೂವರಿಗೆ ಚಾಕು ಇರಿತ

0
9

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಜನಸಂದಣಿ ಇರುವ ಪ್ರದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ಹಾಡಹಗಲೇ ಮೂವರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದೆ.
ಧಾರವಾಡದ ಎಲ್‌ಐಸಿ ಬಳಿ ಈ ಘಟನೆ ನಡೆದಿದೆ. ಕಿರಣ್, ಆಸೀಫ್ ಹಾಗೂ ಶಾನವಾಜ್ ಎಂಬುವವರಿಗೆ ಚಾಕು ಇರಿಯಲಾಗಿದೆ.
ಯುವತಿ ವಿಚಾರವಾಗಿ ಈ ಘಟನೆ ನಡೆದಿದೆ. ಚಾಕು ಇರಿದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗೆಳೆಯನ ಸ್ನೇಹಿತೆಯ ವಿಚಾರವಾಗಿ ಜಗಳ ನಡೆದು ಕೊನೆಗೆ ಮೂವರ ಮೇಲೆ ಚಾಕು ದಾಳಿ ಮಾಡಲಾಗಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೂವರೂ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ.

Previous articleಬಿಜೆಪಿ, ಜೆಡಿಎಸ್‌ಗೆ ಹೊಟ್ಟೆಯುರಿ ಶುರುವಾಗಿದೆ
Next articleಅಂಗಡಿಯಲ್ಲೇ ಆತ್ಮಹತ್ಯೆಗೆ ಶರಣಾದ ಮಾಲಕಿ