ದಾವಣಗೆರೆ: ಸಚಿವರ ಮೇಲೆ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐಗೆ ವಹಿಸುವಂತೆ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಸಂಗತಿ ಬಹಿರಂಗ ಆಗಬೇಕಾದರೆ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ಸಂವಿಧಾನದ ವಿರುದ್ಧವಾಗಿ, ಧರ್ಮಾಧಾರಿತವಾಗಿ ಮುಸ್ಲಿಂರಿಗೆ ಶೇ. ೪ ಮೀಸಲಾತಿ ಕೊಡಬೇಡಿ ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಹೇಳಿದ್ದವು. ಆದರೆ ಸಂವಿಧಾನದ ವಿರುದ್ಧ ಮೀಸಲಾತಿ ಕೊಟ್ಟಿದ್ದಾರೆ. ಎರಡೂ ಸದನದಲ್ಲಿ ಬಿಲ್ ಪಾಸಾಗಿದೆ. ಧರ್ಮಾಧಾರದ ಮೇಲೆ, ಲಿಂಗದ ಆಧಾರದ ಮೇಲೆ ಮೀಸಲಾತಿ ಕೊಡಲು ಬರಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿದ್ದರೂ ಕಾಂಗ್ರೆಸ್ ಸರ್ಕಾರ ಮತ ಗಳಿಕೆಗಾಗಿ ತುಷ್ಟೀಕರಣ ಮಾಡಿದೆ ಎಂದು ಆರೋಪಿಸಿದರು.