ಕುಕನೂರು: ತಾಲೂಕಿನ ಬಳಗೇರಿ ಗ್ರಾಮದಲ್ಲಿ ಹುಡುಗ-ಹುಡುಗಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವ ಘಟನೆ ನಡೆದಿದೆ.
ಪ್ರಕಾಶ ಹನುಮಪ್ಪ ಭಜಂತ್ರಿ (೨೦) ಹಾಗೂ ಸುಮಾ ನಿಂಗಪ್ಪ ಶೇಷಗಿರಿ(೧೭) ಮೃತರು. ಸುಮಾಳ ಮನೆಗೆ ಹೋಗಿ ಸುಮಾಳ ಕತ್ತನ್ನು ಚಾಕುವಿನಿಂದ ಕೊಯ್ದು ಅದೇ ಚಾಕುವಿನಿಂದ ತನ್ನ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸುಮಾರು ೧೫ ದಿನಗಳ ಹಿಂದೆ ಪ್ರಕಾಶನ ಪೋಷಕರು ಮತ್ತು ಸುಮಾಳ ಪೋಷಕರು ಪ್ರಕಾಶನಿಗೆ ಸುಮಾಳ ತಂಟೆಗೆ ಹೋಗಬೇಡ ಮೊದಲು ಓದು ಎಂದು ತಿಳಿಹೇಳಿದ್ದರು. ಇದರಿಂದ ಸಿಟ್ಟಾಗಿ, ಸುಮಾ ನನಗೆ ಸಿಗುವುದಿಲ್ಲ ಅಂದರೆ ಯಾರಿಗೂ ಸಿಗೋದ ಬೇಡ ಎಂದು ಅವಳನ್ನು ಕೊಂದು ತಾನು ಆತ್ಮಹತ್ಯ ಮಾಡಿಕೊಂಡಿದ್ದಾನೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.