ಹಂಪಿಗೆ ಪ್ರವಾಸಿಗರ ದಂಡು…

0
24

ಹೊಸಪೇಟೆ: ಕ್ರಿಸ್‌ಮಸ್ ಜೊತೆ ವೀಕೆಂಡ್ ರಜೆ ದೊರೆತ ಹಿನ್ನೆಲೆ ಶನಿವಾರದಿಂದಲೇ ಹಂಪಿ ಸ್ಮಾರಕಗಳ ವೀಕ್ಷಣೆಗೆ ೧೦ ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದಾರೆ.
ನಗರದ ಮತ್ತು ಕಮಲಾಪುರ ಪಟ್ಟಣ ಹಾಗೂ ಗಂಗಾವತಿಯಲ್ಲಿನ ಎಲ್ಲ ಲಾಡ್ಜ್‌ಗಳು ಭರ್ತಿಯಾಗಿ ಸ್ಥಳ ಸಿಗದೆ ಪ್ರವಾಸಿಗರು ಪರದಾಡಿದ್ದಾರೆ.
ಹಂಪಿಯ ವಿರೂಪಾಕ್ಷೇಶ್ವರ ದೇಗುಲ, ಎದುರು ಬಸವಣ್ಣ ಮಂಟಪ, ಸಾಲುಮಂಟಪ, ರಥ ಬೀದಿ, ಕಡಲೆ ಕಾಳು, ಸಾಸಿವೆ ಕಾಳು, ಕೃಷ್ಣ ದೇಗುಲ, ಕೃಷ್ಣ ಬಜಾರ್, ನೆಲಸ್ತರದ ಶಿವ ದೇಗುಲ, ಅಕ್ಕ-ತಂಗಿಯರ ಗುಡ್ಡ, ಹಜಾರ ರಾಮ ದೇಗುಲ, ಕಮಲ ಮಹಲ್, ಆನೆ ಲಾಯ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನ ತೇರು, ಕುದುರೆಗೊಂಬೆ ಮಂಟಪ, ಪುರಂದರದಾಸರ ಮಂಟಪ, ಅಚ್ಯುತರಾಯ ದೇಗುಲ, ವರಾಹ ದೇಗುಲ, ಚಕ್ರತೀರ್ಥ, ವಾಲಿ ಸುಗ್ರೀವ ಗುಹೆ, ಸೀತೆ ಸೆರಗು, ರಾಮಲಕ್ಷ್ಮಣ ದೇಗುಲ, ಯಂತ್ರೋದ್ಧಾರಕ ಆಂಜನೇಯ ದೇಗುಲ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಪ್ರವಾಸಿಗರು ಆಗಮಿಸಿದ್ದರು.

Previous articleವಿವಾದ ಹುಟ್ಟುಹಾಕುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ
Next articleಹರೀಶಿಯಲ್ಲಿ ಕಾಡಾನೆ ಹಾವಳಿಯ ಆತಂಕ