ಸ್ವಿಗ್ಗಿ ಉದ್ಯೋಗಿಗಳಿಂದ ಪ್ರತಿಭಟನೆ

0
22

ಮಂಗಳೂರು: ಆನ್‌ಲೈನ್‌ ಆಹಾರ ಡೆಲಿವರಿ ಕಂಪನಿಯ ಮಂಗಳೂರಿನ ಎಕ್ಸಿಕ್ಯೂಟಿವ್‌ಗಳು ಮಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದರು. ಆಹಾರ ಪೂರೈಕೆಯ ಕಮಿಷನ್‌ ನೀಡದೇ ಇರುವುದು, ಅಧಿಕ ಕೆಲಸದ ಒತ್ತಡ ಮುಂತಾದ ಕಾರಣ ಆರೋಪಿಸಿ ಡೆಲಿವರಿ ಬಾಯ್‌ಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳೂರಿನ ಕುಂಟಿಕಾನ ಬಳಿ ಸ್ವಿಗ್ಗಿ ಕಂಪನಿಯ ಕಚೇರಿ ಎದುರು ಡೆಲಿವರಿ ಬಾಯ್‌ಗಳು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Previous articleಭಿನ್ನರ ಉಚ್ಚಾಟನೆಗೆ ನಾಳೆ ಬೆಂಗಳೂರಲ್ಲಿ ಸಭೆ
Next articleವಿವಿಧೆಡೆ ಚಿಕನ್ ಪಾಕ್ಸ್ ಆತಂಕ: ಕಡಬ ತಾಲೂಕಿನಲ್ಲೇ 21 ಪ್ರಕರಣ