ಸ್ವಾಮೀಜಿ ನೇಣಿಗೆ ಶರಣು

0
21

ಬೆಳಗಾವಿ: ಬೈಲಹೊಂಗಲ ತಾಲೂಕಿನ ನೆಗಿನಾಳದ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀಗಳು ನಿನ್ನೆ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .
ಮುರುಘಾ ಶರಣರ ಪರಿಸ್ಥಿತಿಯಿಂದ ಮನನೊಂದು ಶ್ರೀಗಳು ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನ ಎಲ್ಲರಲ್ಲಿ ಮೂಡುತ್ತಿದೆ . ಘಟನೆ ಕುರಿತಾಗಿ ಬೈಲಹೊಂಗಲ ಪೊಲೀಸರು ಮಠಕ್ಕೆ ಬೇಟಿ ನೀಡಿದ್ದಾರೆ .
ಶ್ರೀಗಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು , ತನಿಖೆಯಿಂದ ಕಾರಣ ತಿಳಿದು ಬರಬೇಕಾಗಿದೆ.
ಇತ್ತೀಚೆಗೆ ಮಹಿಳೆಯರಿಬ್ಬರು ಮಠಗಳ ಬಗ್ಗೆ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಸದ್ರೀಗಳ ಹೆಸರು ಪ್ರಸ್ತಾಪವಾಗಿತ್ತು ಎನ್ನಲಾಗಿದೆ. ಈ ಆಡಿಯೊ ವೈರಲ್ ನಂತರ ಒಂಚೂರು ನೊಂದಿದ್ದ ಶ್ರೀಗಳು ನಿನ್ನ ರಾತ್ರಿಯೂ ತಮ್ಮ ಭಕ್ತರ ಬಳಿ ಎಲ್ಲರೂ ಈಗ ತಮ್ಮನ್ನು ಸಂದೇಹದಿಂದ ನೋಡುವಂತಾಗಿದೆ ಎಂದು ಹೇಳಿಕೊಂಡಿದ್ದರೆಂಬ ಮಾಹಿತಿಯು ಇದೆ.
ಒಟ್ಟಿನಲ್ಲಿ ಡೆತ್ ನೋಟ್ ಹಾಗೂ ಪೊಲೀಸ್ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರಬೀಳಲಿದೆ

Previous articleಚಿತ್ರದುರ್ಗ ಪೊಲೀಸ್ ಯಾರನ್ನು ಬಂಧಿಸಿಲ್ಲ ಎಂದ ಎಸ್ಪಿ
Next articleಮುರುಘಾಶ್ರೀಗೆ ಸೆ. 14ರ ವರೆಗೆ ಜೈಲುವಾಸ