ಸ್ವಾತಂತ್ರ್ಯ ದಿನಾಚರಣೆ: ನೆಲದ ಮೇಲೆ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

0
22

ಧಾರವಾಡ : 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧಾರವಾಡದ ಆರ್‌ ಎನ್‌ : ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ನೆಲದ ಮೇಲೆ ಕುಳಿತು ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಶಾಲಾ ಮಕ್ಕಳು ಮೈದಾನದಲ್ಲಿ ಕಿರುನಾಟಕ, ನೃತ್ಯ, ದೇಶಭಕ್ತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಧ್ವಜಾರೋಹಣ ನೆರವೇರಿಸಿದ ನಂತರ ಸಚಿವ ಲಾಡ್‌ ಅವರು, ಈ ಎಲ್ಲಾ ಕಾರ್ಯಕ್ರಮಗಳನ್ನು ನೆಲದ ಮೇಲೆ ಸಾಮಾನ್ಯರಂತೆ ಕುಳಿತು ವೀಕ್ಷಿಸಿದರು.

ಸಚಿವರೇ ತಮ್ಮೊಂದಿಗೆ ಕುಳಿತದ್ದು ಕಂಡ ಮಕ್ಕಳು ಹೆಚ್ಚಿನ ಸಂತೋಷಗೊಂಡರು.

ಸಚಿವರ ಈ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

Previous articleನೆರೆಯ ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ
Next articleಮೊದಲ ಎಲಿಮೆಂಟ್ ಅಳವಡಿಕೆ ಆರಂಭ