ಸ್ತ್ರೀಯರಲ್ಲಿ ವಾಕ್ ಶಕ್ತಿ ಪರಿಣಾಮಕಾರಿಯಾದದ್ದು….

0
11
ಗುರುಬೋಧೆ
PRATHAPPHOTOS.COM

ಮಹಿಳೆಗೆ ದೇವರು ದಯಪಾಲಿಸಿದ ಮತ್ತೆ ಕೆಲವು ಶಕ್ತಿಗಳೆಂದರೆ ಕೀರ್ತಿ, ಸಂಪತ್ತನ್ನು ಕಾಪಾಡುವುದು ಅಲ್ಲದೆ ಮಾತು.
ಈ ಶಕ್ತಿಗಳನ್ನು ದೇವರು ತಾನೇ ದಯಪಾಲಿಸಿದ್ದೇನೆ ಎಂದು ಹೇಳಿದ್ದಾರೆ. ಕೀರ್ತೀಃ ಶ್ರೀಃ ವಾಕ್ ಚ ಅಂದರೆ ಮಕ್ಕಳಿಗೆ ಪ್ರೀತಿಯಿಂದ ಚೆನ್ನಾಗಿ ನುಡಿದರೆ ತಾಯಿಂದ ಆಗುವಂತಹ ಪ್ರಭಾವ ಇನ್ಯಾವ ಗುಡಿಯಿಂದ ಗುಡಿಗಿನಿಂದಲೂ ಆಗುವದಿಲ್ಲ.
ತಾಯಿಯ ನಡೆ ನುಡಿಯಿಂದ ಆಗುವ ಪ್ರಭಾವ ಮಕ್ಕಳಿಗೆ ಇನ್ಯಾವುದರಿಂದಲೂ ಆಗುವುದಿಲ್ಲ. ಮಕ್ಕಳು ಇನ್ಯಾವದರಿಂದಲೂ ಕಲಿಯಲು ಸಾಧ್ಯವಿಲ್ಲ. ವಾಕ್ ಚ ನಾರೀಣಾಂ, ಆಶಕ್ತಿಯನ್ನು ಸ್ತ್ರೀಯರಲ್ಲಿ ನಾನು ಕೊಟ್ಟಿದ್ದೇನೆ ಅದು ನನ್ನ ವಿಭೂತಿ ನನ್ನ ಸನ್ನಿಧಾನ ಇದೆ. ಮಾತಿನ ಉಪಯೋಗವನ್ನು ಮಾತೆಯರು ಚೆನ್ನಾಗಿ ಮಾಡಿಕೊಳ್ಳಬೇಕು ಏಕೆಂದರೆ ಭಗವಂತ ಹೇಳುತ್ತಾನೆ `ಮಾತು’ ನಾನು ಕೊಟ್ಟ ದೊಡ್ಡ ವರದಾನವದು ಎನ್ನುತ್ತಾನೆ.
ಸ್ಮೃತಿಃ ಮೇಧಾ ಧೃತಿಃ ಕ್ಷಮಾ ಮಾಡುವ ಕಾರ್ಯದಲ್ಲಿ ಗಂಡ ಅತ್ತೆ ಮಾವ ಮಕ್ಕಳು ಬಾಂಧವರು ಮರೆತರೆ ತಾನು ನೆನಪಿನಲ್ಲಿಟ್ಟು ಕೊಂಡು ನೆನಪು ಮಾಡಿಕೊಡಬೇಕಾದ ಕೆಲಸ ಒಳ್ಳೆ ನೆನಪಿನ ಶಕ್ತಿಯನ್ನು ಕೊಟ್ಟಿದ್ದಾನೆ. ಮನೆಯಲ್ಲಿ ಸಾಮಾನ್ಯವಾಗಿ ಗಂಡಸರಿಗೆ ಮರೆಗುಳಿತನವೇ ಹೆಚ್ಚು. ಇಂಥ ಸಂದರ್ಭಗಳಲ್ಲಿ ನೆನೆಪು ಮಾಡಿಕೊಂಡು ಕಾಲಕಾಲಕ್ಕೆ ನೆನಪಿಸಿ ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುವದು ಕೂಡ ಮಹಿಳೆಯಿಂದಲೇ ನಡೆಯಬೇಕು. ಈ ಸ್ಮೃತಿ ಶಕ್ತಿ ಸ್ತ್ರೀಯರಿಗಿಂತ ಪುರುಷರಲ್ಲಿ ತೀರಾ ಕಡಿಮೆಯೇ. ಎನ್ನಬೇಕು.
ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಗುರುಕುಲದಲ್ಲಿ ಹತ್ತಾರು ಬಾರಿ ಆವೃತ್ತಿ ಮಾಡಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪರಿಶ್ರಮ ಪುರುಷರಿಗೆ ಇದೆ. ಆದರೆ ಸ್ಮೃತಿಃ ಪ್ರವಚನದಲ್ಲಿ ಕೇಳಿದರೆ ಸಾಕು ಸರಿಯಾಗಿ ನೆನಪಿನಲ್ಲಿಟ್ಟುಕೊಂಡು ಅದನ್ನು ಧಾರಣೆ ಮಾಡಿಕೊಂಡು ಅದನ್ನು ಹೇಳುವ ಶಕ್ತಿಯನ್ನು ಸ್ತ್ರೀಯರಿಗೆ ಕೊಟ್ಟಿದ್ದಾನೆ ಕೃಷ್ಣ ಹೇಳಿದ ಮಾತು ಸ್ಮೃತಿಃ ಮೇಧಾ, ಸ್ಮೃತಿಯಲ್ಲಿ ಮೇಧಾ ಶಕ್ತಿಯ ರೂಪದಲ್ಲಿ ನಾನು ಇದ್ದೇನೆ ಎಂದು ಹೇಳಿದದು. ಸ್ತ್ರೀಯರು ಶಾಸ್ತ್ರ ಪುರಾಣಗಳ ಶ್ರವಣ ಮಾಡಿ ಅದನ್ನು ಸರಿಯಾಗಿ ನೆನಪಿಲ್ಲಿಟ್ಟುಕೊಂಡು ಮಾತಿನ ಮೂಲಕ ತಮ್ಮ ಮಕ್ಕಳಿಗೆ ಉಪದೇಶ ಮಡಬೇಕಾದ ಜವಾಬ್ದಾರಿಯನ್ನು ಸ್ತ್ರೀಯರಿಗೆ ಪರಮಾತ್ಮನು ಕೊಟ್ಟಿದ್ದಾನೆ, ಸ್ತ್ರೀಯರು ನಿಭಾಯಿಸಬೇಕು ಎಂದು ಕೃಷ್ಣ ಹೇಳುತ್ತಾನೆ.

Previous articleವಸತಿ ನಿಲಯದಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ
Next articleಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ‌ ಗೃಹ ಸಚಿವರ‌ ಭೇಟಿ, ಪರಿಶೀಲನೆ