ಹುಬ್ಬಳ್ಳಿ : ಸೋಲಾಪುರ ಮತ್ತು ಧಾರವಾಡ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸುವ ಈ ಕೆಳಗಿನ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲುಗಳು ಮಾರ್ಚ್ ೧ ರಿಂದ ಜಾರಿಗೆ ಬರುವಂತೆ ನಿಯಮಿತ ಹೊಸ ರೈಲು ಸಂಖ್ಯೆಗಳೊAದಿಗೆ ಚಲಿಸುತ್ತವೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ಸೋಲಾಪುರ-ಧಾರವಾಡ ನಿಲ್ದಾಣಗಳ ನಡುವೆ ಪ್ರತಿನಿತ್ಯ ಸಂಚರಿಸುವ ಪ್ಯಾಸೆಂಜರ್ ರೈಲುಗಳ ರೈಲು ಸಂಖ್ಯೆ ೦೭೩೨೧/೦೭೩೨೨ ಈಗ ೫೬೯೦೩/೫೬೯೦೪ ಎಂದು ಮರುಸಂಖ್ಯೆ ನೀಡಲಾಗಿದೆ.
ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಪರಿಷ್ಕೃತ ರೈಲು ಸಂಖ್ಯೆಗಳನ್ನು ಗಮನಿಸುಬೇಕು ಎಂದು ಪ್ರಕಟಣೆಯಲ್ಲಿ ಕೋರಿದೆ.