ಸೋತ ಜಾಗದಲ್ಲೇ ಗೆಲ್ಲುವೆ

0
10

ಬೆಳಗಾವಿ: ೨೦೧೩ರ ವಿಧಾನಸಭೆ, ೨೦೧೪ರ ಲೋಕಸಭೆ ಚುನಾವಣೆಗಳಲ್ಲಿ ನಾನು ಸೋಲು ಕಂಡೆ. ಆದರೆ, ಛಲ ಬಿಡದೆ ಪಕ್ಷ ಸಂಘಟಿಸಿ ಸೋತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೆ ಗೆದ್ದೆ, ಇದೀಗ ಮಗನ ಮೂಲಕ ಬೆಳಗಾವಿ ಲೋಕಸಭೆಯಲ್ಲಿ ಗೆಲ್ಲಬೇಕು. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅಂಕಲಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯ, ದೇಶ ಅಭಿವೃದ್ಧಿ ಸಾಧ್ಯ ಎನ್ನುವುದು ಜನರಿಗೆ ಮನವರಿಕೆಯಾಗಿದೆ ಎಂದರು.

Previous articleಮೇಕೆದಾಟುಗೆ ಅ‌ನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು
Next articleದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ಏನೂ ಹೇಳಲ್ಲ