ಸುಳ್ಯದಲ್ಲಿ ದಾಖಲೆಯ ಬಿಸಿಲು

0
20

ಹೆಚ್ಚಿದ ಬಿಸಿಲು – ಸುಳ್ಯದಲ್ಲಿ ದಾಖಲೆ


ಮಂಗಳೂರು: ದ. ಕ. ಜಿಲ್ಲೆಯಲ್ಲಿ ಉರಿ ಬಿಸಿಲು ಹೆಚ್ಚಾಗಿದ್ದು, ಸುಳ್ಯದಲ್ಲಿ ಮಂಗಳವಾರ ರಾಜ್ಯದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುಳ್ಯ ಹೋಬಳಿಯಲ್ಲಿ ೪೧.೪ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸರಾಸರಿ ೪೦ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.


ವಿವರ: ಸುಳ್ಯ ೪೧.೪, ಪಾಣೆಮಂಗಳೂರು ೪೦.೫, ಮೂಡುಬಿದಿರೆ ೩೯.೦, ಕೊಕ್ಕಡ ೪೦.೩, ಪುತ್ತೂರು ೪೦.೨, ಬಂಟ್ವಾಳ ೩೮.೦, ಬೆಳ್ತಂಗಡಿ ೩೮.೮, ಕಡಬ ೪೦.೪, ವಿಟ್ಲ ೩೮.೬, ಉಪ್ಪಿನಂಗಡಿ ೪೦.೦, ಕೊಡಗಿನ ಸಂಪಾಜೆ ೪೦.೭, ಉಡುಪಿಯ ಕಾರ್ಕಳ ೩೮.೦ ಮತ್ತು ಹೆಬ್ರಿ ೩೯.೫, ಉತ್ತರ ಕನ್ನಡ ಜಿಲ್ಲೆಯ ಸಾಂಬ್ರಾಣಿ ೩೮.೫, ಉಂಬಲಮಣೆ ೩೮.೦, ಸಾವಂತವಾಡ ೩೯.೩, ಬೇಲಿಕೆರೆ (ಅವರ್ಸೆ) ೩೮.೪, ಪಾಲಾ ೩೯.೩, ಮಾವಿನ ಕುರ್ವೆಯಿ ೩೯.೨, ಘಡಸಾಯಿ ೪೧.೧, ಅಂಕೋಲಾ ೩೮.೨, ಮುರ್ಕ್ವಾಡ್ ೩೯.೦, ಮಿರ್ಜಾನ್ ೩೮.೩, ಸಂಪಕಂಡ (ಅಮ್ಮನಹಳ್ಳಿ) ೩೮.೩ ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವರದಿ ತಿಳಿಸಿದೆ.

Previous articleಅಪಘಾತದ ಸೋಗಿನಲ್ಲಿ ಕೊಲೆ: ಮೂವರ ಬಂಧನ
Next articleಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕತ್ರಿನಾ ಕೈಫ್