Home Advertisement
Home ನಮ್ಮ ಜಿಲ್ಲೆ ಸುಪ್ರೀಂ ಮೊರೆ ಹೋದ ಗೋವಾ ಸರ್ಕಾರ

ಸುಪ್ರೀಂ ಮೊರೆ ಹೋದ ಗೋವಾ ಸರ್ಕಾರ

0
85
supreme-court

ಬೆಂಗಳೂರು: ಕೇಂದ್ರ ಸರ್ಕಾರ ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿದ್ದು, ಯೋಜನೆಗೆ ಶೀಘ್ರವೇ ಟೆಂಡರ್ ಕರೆಯುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವ ಹಿನ್ನೆಲೆ ಯೋಜನೆ ತಡೆಯಲು ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿದೆ.
ರಾಜ್ಯ ಸರ್ಕಾರದ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಅನುಮೋದನೆ ನೀಡಿದೆ. ಆದರೆ, ಈ ಯೋಜನೆ ತಡೆಯಲು ಗೋವಾ ಸರ್ಕಾರ ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಸೆಕ್ಷನ್ 29ರ ಪ್ರಕಾರ ವನ್ಯಜೀವಿ ಅಭಯಾರಣ್ಯಗಳಲ್ಲಿ ನೀರು ಹರಿಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂಬ ಕಾನೂನು ಆಧಾರದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಲು ನಿರ್ಧರಿಸಿದೆ.

Previous articleಬಿಜೆಪಿಯಿಂದ ಕೋಟಿ ಕೋಟಿ ಲೂಟಿ
Next article`ಸಾರಥಿ ನಗರ ಮಸೀದಿಗೆ ಬೀಗ’