ಸಿಹಿ ತಿನಿಸಿನ ಬಾಟಲಿ ಗಂಟಲಿನಲ್ಲಿ ಸಿಲುಕಿ ಬಾಲಕ ಸಾವು

0
11

ಕುಷ್ಟಗಿ: ಸಿಹಿ ತಿನಿಸಿನ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಮದೀನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ(2) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಬಾಲಕ ಒಂದು ರೂ.ಗೆ ಸಿಹಿ ತಿನಿಸು ಇರುವ ಗಾಜಿನ ಬಾಟಲಿ ಖರೀದಿ ಮಾಡಿ ತಿನ್ನುವಾಗ ಕೈ ಜಾರಿ ಬಾಟಲಿ ಗಂಟಲಿನಲ್ಲಿ ಹೋಗಿದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗವಾಗ ರಸ್ತೆ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ. ತಾಯಿ, ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಒಂದು ರೂಪಾಯಿಗೆ ಲಭ್ಯವಾಗುವಂತಹ ಜೇಮ್ಸ್ ಬಾಟಲಿ ಸಿಹಿ ತಿಂಡಿ ಮಕ್ಕಳ ಗಮನ ಸೆಳೆಯುತ್ತವೆ. ಆ ಸಿಹಿ ತಿನ್ನಲು ಮುಂದಾದಾಗ ಮಗುವಿನ ಗಂಟಲಿನಲ್ಲಿ ಬಾಟಲಿ ಸಿಲುಕಿಕೊಂಡಿಡು ಮಗು ಸಾವನ್ನಪ್ಪಿದೆ. ಇಂತಹ ವಸ್ತುಗಳನ್ನು ಕೂಡಲೇ ಬ್ಯಾನ್ ಮಾಡುವ ಅವಶ್ಯಕತೆ ಇದೆ ಎಂದು ಸ್ಥಳೀಯ ನಿವಾಸಿ ಸಯ್ಯದ್‌ಖಾಜಾ ಮೈನುದ್ದೀನ್ ಮುಲ್ಲಾ ಹೇಳಿದರು.

Previous articleಬಡವರ ಉದ್ಧಾರಕರನ್ನು ಕಂಡರೆ ಕಾಂಗ್ರೆಸ್‌ಗೆ ಹೊಟ್ಟೆ ಉರಿ
Next articleನಾಳೆ ವಾಡಿಯಲ್ಲಿ ಯೋಗಿ